ನೆಲನೆಲ್ಲಿ ಚಟ್ನಿ…

ನೆಲನೆಲ್ಲಿ ಚಟ್ನಿ ತಯಾರಿಸುವ ವಿಧಾನ:
ಒಂದು ಹಿಡಿಯಷ್ಟು ನೆಲನೆಲ್ಲಿ ಎಲೆ, ಚಿಗುರನ್ನು ರುಚಿಗೆ ಬೇಕಾದಷ್ಟು ಉಪ್ಪು, ಹುಣಸೆ ಹುಳಿ ಹಾಗೂ 2/3 ಹಸಿಮೆಣಸು ಹಾಕಿ ಸ್ವಲ್ಪ ನೀರು ಹಾಕಿ ಬೇಯಿಸಬೇಕು. ನಂತರ ಒಂದು ಬೌಲ್ ತೆಂಗಿನಕಾಯಿ ತುರಿಯ ಜೊತೆಗೆ ಬೇಯಿಸಿದ ನೆಲನೆಲ್ಲಿ/ಹಸಿಮೆಣಸು ಹಾಕಿ ಮಿಕ್ಸಿಯಲ್ಲಿ ಗಟ್ಟಿಯಾಗಿ ರುಬ್ಬಬೇಕು. ನಂತರ ಕರಿಬೇವು ಅಥವಾ ಬೆಳ್ಳುಳ್ಳಿ ಒಗ್ಗರಣೆ ಹಾಕಿದರೆ ನೆಲನೆಲ್ಲಿ ಚಟ್ನಿ ಸಿದ್ಧ.
ಬರಹ: ಶ್ರೀಮತಿ ರಶ್ಮಿ ಪಿ.ಸಿ