ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ – ಇಲೆಕ್ಟ್ರಾನಿಕ್ಸ್ ವಿಭಾಗದ ವತಿಯಿಂದ ತಾಂತ್ರಿಕ ಕಾರ್ಯಾಗಾರ…
ಮೂಡಬಿದ್ರಿ: ಇಲ್ಲಿನ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ವತಿಯಿಂದ ಆಯೋಜಿಸಲಾಗಿರುವ ” ಸಿಮ್ಯುಲೇಶನ್, ಸ್ಕಿಮ್ಯಾಟಿಕ್ ಕ್ಯಾಪ್ಚರ್ ಆಂಡ್ ಪಿಸಿಬಿ ಡಿಸೈನ್ ಆಫ್ ಇಲೆಕ್ಟ್ರಾನಿಕ್ ಸರ್ಕ್ಯೂಟ್ಸ್ ” ಎಂಬ ವಿಷಯದ ಕುರಿತಾದ 3 ದಿನಗಳ ತಾಂತ್ರಿಕ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ಮಾ.21 ರಂದು ನಡೆಯಿತು.
ಯೆನೆಪೋಯ ಟೆಕ್ನಾಲಜಿ ಇನ್ಕ್ಯೂಬೆಟರ್, IEEE ಹಾಗೂ ISTE ಸಹಯೋಗದೊಂದಿಗೆ ಕಾರ್ಯಾಗಾರ ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ಇನ್ವಿಹಬ್ ಟೆಕ್ನೋ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ನಿರ್ದೇಶಕ ಶಶಾಂಕ್ ಎಂ ಗೌಡ ಭಾಗವಹಿಸಿದ್ದರು. ವಿಭಾಗ ಮುಖ್ಯಸ್ಥ ಪ್ರೊ. ಗಂಗಾಧರ ಉಪಸ್ಥಿತರಿದ್ದರು. ಕಾರ್ಯಾಗಾರದ ಸಂಯೋಜಕಿ ಪ್ರೊ.ರೆಬೇಕ ಫೆರ್ನಾಂಡಿಸ್ ಕಾರ್ಯಾಗಾರದ ಮಾಹಿತಿ ನೀಡಿದರು. ನವ್ಯ ಜಿ ನಾಯ್ಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಹಮ್ಮದ್ ಶಾದಾಬ್ ವಂದಿಸಿದರು.
ವಿಭಾಗದ ಮೂರನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.