ಕರ್ನಾಟಕ ಪ್ರೌಢಶಾಲೆ ಮಾಣಿಯಲ್ಲಿ ರಾಜ್ಯೋತ್ಸವ ಕವಿಗೋಷ್ಠಿ…

ಬಂಟ್ವಾಳ ,ನ.1 :ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ) ಹೂವಿನಹಡಗಲಿ,ಜಿಲ್ಲಾ ಬರಹಗಾರರ ಸಂಘ ದಕ್ಷಿಣ ಕನ್ನಡ ಮತ್ತು ಕರ್ನಾಟಕ ಪ್ರೌಢ ಶಾಲೆ ಮಾಣಿ ಇವರ ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವ ಕವಿಗೋಷ್ಠಿ ನಡೆಯಿತು.
ಸರಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ, ಕವಿ, ಸಾಹಿತಿ ಶಾಂತಾ ಪುತ್ತೂರು ಅಧ್ಯಕ್ಷತೆ ವಹಿಸಿದ್ದರು. ಬರಹಗಾರರ ಸಂಘದ ಜಿಲ್ಲಾಧ್ಯಕ್ಷ ಜಯಾನಂದ ಪೆರಾಜೆ ಮುಖ್ಯ ಅತಿಥಿಯಾಗಿ ಕನ್ನಡ ನಾಡು ನುಡಿ, ಸಂಸ್ಕೃತಿಯ ಉಪನ್ಯಾಸ ನೀಡಿದರು. ರಾಜ್ಯೋತ್ಸವ ಕವಿಗೋಷ್ಠಿಗೆ ಉಪನ್ಯಾಸಕಿ ಗೀತಾ ಕೊಂಕೋಡಿ ಕವನ ವಾಚಿಸಿ ಚಾಲನೆ ನೀಡಿದರು.

ಹಿರಿಯ ಕವಿಗಳಾದ ಎಂ. ಡಿ. ಮಂಚಿ, ಡಾ.ಮೈತ್ರಿ ಭಟ್ ವಿಟ್ಲ, ಆನಂದ ರೈ ಅಡ್ಕಸ್ಥಳ, ಸತೀಶ್ ಬಿಳಿಯೂರು, ಎಸ್. ಜಯಶ್ರೀ ಶೆಣೈ ಬಂಟ್ವಾಳ, ರವೀಂದ್ರ ಕುಕ್ಕಾಜೆ, ಹೇಮಂತ್ ಕುಮಾರ್ ಡಿ, ಶ್ವೇತಾ ಡಿ.ಬಡಗಬೆಳ್ಳೂರು, ವಿಸ್ಮಿತಾ ಎಂ. ಪಡುಮಲೆ, ಚೇತನ್ ಹೆಚ್.ಎಂ, ದೇವಕಿ ಜೆ.ಜಿ ಬನ್ನೂರು, ಶ್ರೀಶಾವಾಸವಿ ತುಳುನಾಡ್, ಫಿಲೋಮಿನಾ ಐಡಾ ಲೋಬೊ, ಜಯರಾಮ ಕಾಂಚನ, ಯಶೋದಾ, ಮರಿಯಮ್ಮ ಸ್ವಾಬಿರಾ, ಜಮಿಹಾ ತಮ್ಮ ಸ್ವರಚಿತ ಕವನ ವಾಚಿಸಿದರು.
ಬರಹಗಾರರು ಹೆಚ್ಚು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.ಕೇವಲ ನವಯುಗದ ಸಾಹಿತ್ಯಗಳನ್ನಷ್ಟೇ ಅಲ್ಲ ಹಳಗನ್ನಡ, ನಡುಗನ್ನಡವನ್ನೂ ಓದುವ ಅಭ್ಯಾಸ ಮಾಡಿಕೊಳ್ಳಬೇಕು.ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆಯಲು ಅಭ್ಯಾಸ ಮಾಡಬೇಕು .ಕನ್ನಡವನ್ನು ನಿತ್ಯ ಬಳಸಬೇಕು.ಬರವಣಿಗೆಯಲ್ಲಿ ನಿರಂತರತೆ ಕಾಯ್ದುಕೊಳ್ಳಬೇಕು ಎಂದು ಅಧ್ಯಕ್ಷತೆ ನೆಲೆಯಲ್ಲಿ ಶಾಂತಾ ಪುತ್ತೂರು ಹೇಳಿದರು. ಕವನಗಳ ವಿಮರ್ಶೆ ಮಾಡಿ ಸ್ವರಚಿತ ಕವನ ವಾಚನ ಮಾಡಿದರು.
ಜಯರಾಮ ಕಾಂಚನ ಸ್ವಾಗತಿಸಿದರು.ಅಪೂರ್ವ ಕಾರಂತ್ ಕಾರ್ಯಕ್ರಮ ನಿರೂಪಿಸಿದರು. ಶ್ಯಾಮಲಾ ವಂದಿಸಿದರು.

whatsapp image 2024 11 02 at 5.01.30 pm

whatsapp image 2024 11 02 at 5.01.30 pm (1)

Sponsors

Related Articles

Back to top button