ವಕ್ಫ್ ವಿವಾದ – ಬಂಟ್ವಾಳದಲ್ಲಿ ಬಿಜೆಪಿಯಿಂದ ಪ್ರತಿಭಟನೆ,ರಾಜ್ಯಪಾಲರಿಗೆ ಮನವಿ…

ಬಂಟ್ವಾಳ: ಬಂಟ್ವಾಳದಲ್ಲಿಯೂ ಮೋನಪ್ಪ ಗೌಡ ಎಂಬ ಕೃಷಿಕರ ಆಸ್ತಿಯನ್ನು ವಕ್ಫ್ ಎನ್ನಲಾಗುತ್ತಿದ್ದು, ಅದಕ್ಕಾಗಿ ನ್ಯಾಯಾಲಯಕ್ಕೆ ಹೋದರೆ ಏನೂ ಆಗದ ಸ್ಥಿತಿ ಇದೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭ ಸಂವಿಧಾನಕ್ಕೆ ತೊಂದರೆಯಾಗುತ್ತಿದೆ ಎನ್ನುತ್ತಿದ್ದವರು ಈಗ ಎಲ್ಲಿದ್ದಾರೆ? ಎಂದು ಪ್ರಶ್ನೆ ಮಾಡಬೇಕಾದ ಸ್ಥಿತಿ ಇದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ರಾಜ್ಯ ಸರಕಾರವು ಲ್ಯಾಂಡ್ ಜಿಹಾದ್-ವಕ್ಫ್ ಅಕ್ರಮದ ಮೂಲಕ ರೈತ ವಿರೋಧಿ ನೀತಿಯನ್ನು ತಳೆದಿದೆ ಎಂದು ಆರೋಪಿಸಿ ಬಿ.ಸಿ.ರೋಡಿನಲ್ಲಿ ಬಂಟ್ವಾಳ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ಜಮೀರ್ ಖಾನ್ ಎನ್ನುವ ಸಚಿವರನ್ನು ಹಿಡಿದುಕೊಂಡು ಹಿಂದೂಗಳು, ರೈತರ ಭೂಮಿಯನ್ನು ವಕ್ಫ್ ಆಸ್ತಿಯಾಗಿ ಪರಿವರ್ತಿಸುವ ಕಾರ್ಯ ಮಾಡುತ್ತಿದ್ದು, ಕಾಂಗ್ರೆಸ್‌ನ ಇಂತಹ ನೀತಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಕೇಂದ್ರದ ಮೋದಿ ಸರಕಾರ ಕಾನೂನಿಗೆ ತಿದ್ದುಪಡಿ ತರುವ ಕಾರ್ಯ ಮಾಡಲಿದೆ‌ ಎಂದವರು ಹೇಳಿದರು.
ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹಾಗೂ ರಾಜ್ಯ ಮುಖಂಡ ವಿಕಾಸ್ ಪುತ್ತೂರು ಮಾತನಾಡಿ, ರಾಜ್ಯ ಸರಕಾರವು ಕಳೆದ ಒಂದೂವರೆ ವರ್ಷಗಳಲ್ಲಿ ಒಮ್ಮೆಯೂ ಹಿಂದೂಗಳ ಪರ ಕೆಲಸ ಮಾಡಿಲ್ಲ. ಬದಲಾಗಿ ಭಯೋತ್ಪಾದಕರಿಗೆ ಕ್ಲೀನ್ ಚಿಟ್ ಕೊಡುವ ಕಾರ್ಯ ಮಾಡಿದ್ದಾರೆ. ವಕ್ಫ್ ಅಕ್ರಮದ ರೂವಾರಿ ಜಮೀರ್ ಅವರು ದ.ಕ.ಜಿಲ್ಲೆಗೆ ಬಂದರೆ ಬೂಟ್ ರುಚಿ ತೋರಿಸಬೇಕಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ ಬಜ , ಶಿವಪ್ರಸಾದ್ ಶೆಟ್ಟಿ ,ಬಿಜೆಪಿ ಪ್ರಮುಖರಾದ ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು, ಸಂದೇಶ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಪುರುಷೋತ್ತಮ ಸಾಲ್ಯಾನ್, ಜನಾರ್ದನ ಸಾಲ್ಯಾನ್, ಮೋನಪ್ಪ ದೇವಸ್ಯ, ಯಶೋಧರ ಕರ್ಬೆಟ್ಟು, ಪ್ರೇಮನಾಥ ಶೆಟ್ಟಿ ಅಂತರ, ವೆಂಕಟೇಶ್ ನಾವಡ, ಡೊಂಬಯ ಅರಳ, ಆನಂದ ಎ.ಶಂಭೂರು, ಮೋಹನ್ ಪಿ.ಎಸ್, ರಾಮದಾಸ್ ಬಂಟ್ವಾಳ್, ದೇವದಾಸ್ ಶೆಟ್ಟಿ, ನಂದರಾಮ ರೈ ಬೆಳ್ಳೂರು, ಗಣೇಶ್ ರೈ ಮಾಣಿ, ಸುರೇಶ್ ಕೋಟ್ಯಾನ್, ದಿನೇಶ್ ಭಂಡಾರಿ, ಹರಿಪ್ರಸಾದ್, ಪುಷ್ಪರಾಜ್ ಚೌಟ, ಗೋವಿಂದ ಪ್ರಭು, ಸನತ್ ಕುಮಾರ್ ರೈ, ವಿದ್ಯಾವತಿ ಪ್ರಮೋದ್, ಹರ್ಷಿಣಿ ಪುಷ್ಪಾನಂದ, ದಿನೇಶ್ ಶೆಟ್ಟಿ ದಂಬೆದಾರ್, ಮೀನಾಕ್ಷಿ ಗೌಡ, ಸಂತೋಷ್ ರಾಯಿಬೆಟ್ಟು, ಅಜಿತ್ ಶೆಟ್ಟಿ ಮೊದಲಾದವರಿದ್ದರು.

whatsapp image 2024 11 04 at 3.27.05 pm

Sponsors

Related Articles

Back to top button