ಸಾಮರಸ್ಯ ಮತ್ತು ಸೌಹಾರ್ದತೆಯ ಚರಿತ್ರೆಯಿರುವ ನಾಡು ನಮ್ಮದು, ಚರಿತ್ರೆಗಳನ್ನು ತಿರುಚುವ ಪ್ರಯತ್ನ ಸಲ್ಲದು: ಜನಾಬ್ ಟಿ ಎಂ ಶಹೀದ್ ತೆಕ್ಕಿಲ್…
ಸೌಹಾರ್ದತೆಯ ಸಂದೇಶ ಮೊಳಗಿಸಿದ ಪೇರಡ್ಕ ಗೂನಡ್ಕ ಉರೂಸ್ ಸರ್ವ ಧರ್ಮ ಸಮ್ಮೇಳನ...
ಸುಳ್ಯ: ನವ ತಲೆಮಾರಿಗೆ ಈ ದೇಶದ ನೈಜ ಇತಿಹಾಸ ತಿಳಿಯುವ ವಾತಾವರಣ ಇಂದು ದೊರಕುತ್ತಿಲ್ಲ. ಸಾಮರಸ್ಯ ಮತ್ತು ಸೌಹಾರ್ದತೆಯ ಚರಿತ್ರೆಯಿರುವ ನಾಡು ನಮ್ಮದು. ಆದರೆ ಇಂದು ಅಂತಹ ಚರಿತ್ರೆಗಳನ್ನು ತಿರುಚುವ ಪ್ರಯತ್ನ ನಡೆಯುತ್ತಿವೆ. ಅದನ್ನು ನಾವು ಎದುರಿಸಬೇಕು. ಸಣ್ಣ ಪುಟ್ಟ ತಪ್ಪುಗಳ ವೈಭವೀಕರಣ ನಡೆಸುವುದನ್ನು ಬಿಟ್ಟು ಒಳಿತುಗಳನ್ನು ಪ್ರಚುರಪಡಿಸುವ ಕಾರ್ಯ ನಡೆದರೆ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ಪೇರಡ್ಕ ಜಮಾಅತ್ ಅಧ್ಯಕ್ಷರೂ, ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಪರಿಷ್ಕರಣೆ ಸಲಹಾ ಮಂಡಳಿ ಸಚಿವ ದರ್ಜೆ ಅಧ್ಯಕ್ಷರೂ ಆದ ಜನಾಬ್ ಟಿ ಎಂ ಶಹೀದ್ ತೆಕ್ಕಿಲ್ ಅಭಿಪ್ರಾಯಪಟ್ಟರು.
ಇತಿಹಾಸ ಪ್ರಸಿದ್ಧ ಪೇರಡ್ಕ ಗೂನಡ್ಕ ಮಖಾಂ ಉರೂಸಿನ ಭಾಗವಾಗಿ ತೆಕ್ಕಿಲ್ ಮೊಹಮದ್ ಹಾಜಿ ವೇದಿಕೆಯಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೇರಡ್ಕ ಗೂನಡ್ಕ ಮತ್ತು ಸಮೀಪ ಪ್ರದೇಶಗಳಲ್ಲಿ ಸೌಹಾರ್ದಯುತ ಸಮಾಜ ನಿರ್ಮಾಣ ಮಾಡಲು ತೆಕ್ಕಿಲ್ ಮುಹಮ್ಮದ್ ಹಾಜಿ ಸೇರಿದಂತೆ ತಮ್ಮ ಪೂರ್ವಿಕರ ಕೊಡುಗೆಯನ್ನು ಸ್ಮರಿಸಿಕೊಂಡರು.
ಪೇರಡ್ಕ ಖತೀಬರಾದ ಅಹ್ಮದ್ ನಈಂ ಮಅಬರಿ ಫೈಝಿ ಸೌಹಾರ್ದ ಸಂದೇಶ ನೀಡಿ ಮಾತನಾಡಿ, ಎಲ್ಲಾ ಧರ್ಮೀಯರು ಈ ರೀತಿ ಒಂದುಗೂಡಿ ಒಂದೇ ವೇದಿಕೆಯಲ್ಲಿ ಪರಸ್ಪರ ಮುಕ್ತವಾಗಿ ಮಾತನಾಡುವ ಅವಕಾಶಗಳು ದೇಶದ ಪ್ರತಿಯೊಂದು ಹಳ್ಳಿಗಳು ಮತ್ತು ಸ್ಥಳೀಯ ಧಾರ್ಮಿಕ ಸಮಾರಂಭಗಳಲ್ಲಿ ಸೃಷ್ಟಿಯಾದರೆ ತಪ್ಪು ಕಲ್ಪನೆಗಳು ಮತ್ತು ಅನುಮಾನಗಳು ದೂರವಾಗಿ ನೈಜ ಸೌಹಾರ್ದತೆ ಸಾಧ್ಯವಾಗಬಹುದು ಎಂದು ನುಡಿದರು.
ಕಲ್ಲುಗುಂಡಿ ಚರ್ಚ್ ಧರ್ಮಗುರು ರೆವರೆಂಡ್ ಫಾದರ್ ಪೌಲ್ ಕ್ರಾಸ್ತಾ, ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ. ಉಮರ್ ಬೀಜದಕಟ್ಟೆ, ಸುಡಾ ಅಧ್ಯಕ್ಷ ಕೆ.ಎಂ ಮುಸ್ತಫಾ ಸುಳ್ಯ, ಅರಂತೋಡು ಖತೀಬ್ ಇಸ್ಮಾಯಿಲ್ ಫೈಝಿ ಗಟ್ಟಮನೆ, ಸಂಪಾಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್ ಕೆ ಹನೀಫ ಸಂಪಾಜೆ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಇಸ್ಮಾಯಿಲ್ ಪಡ್ಪಿನಂಗಡಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ರಾಧಾಕೃಷ್ಣ ಬೊಳ್ಳೂರು, ತೊಡಿಕಾನ ದೇವಸ್ಥಾನ ಸಮಿತಿಯ ತೀರ್ಥರಾಮ ಗೌಡ ಪರ್ನೋಜಿ, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ವರ್ತಕರ ಸಂಘದ ಅಧ್ಯಕ್ಷರಾದ ಚಕ್ರಪಾಣಿ ಯು.ಬಿ ಮುಂತಾದವರು ಶುಭಹಾರೈಸಿ ಮಾತನಾಡಿದರು.
ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಕಲ್ಲುಗುಂಡಿ ಮಹಾವಿಷ್ಣು ಮೂರ್ತಿ ದೇವಸ್ಥಾನದ ಅಧ್ಯಕ್ಷ ಶ್ರೀ ಜಗದೀಶ್ ರೈ, ಮೂಸೆಕುಂಞಿ ಸುಳ್ಯ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಶಂಸುದ್ದೀನ್, ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ.ಎಸ್, ಅಡ್ವೊಕೇಟ್ ಅಬೂಬಕರ್ ಅಡ್ಕಾರ್, ಮದ್ರಸ ಮೇನೇಜ್ ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಭವಾನಿ ಶಂಕರ ಕಲ್ಮಡ್ಕ, ಕ್ರೈಸ್ತ ಸಂಘದ ಒಕ್ಕೂಟದ ಅಧ್ಯಕ್ಷರಾದ ಸಂತೋಷ್ ಕ್ರಾಸ್ತಾ, ಕಲ್ಲುಗುಂಡಿ ಚರ್ಚ್ ಉಪಾಧ್ಯಕ್ಷರಾದ ಲ್ಯಾನ್ಸಿ ಡಿಸೋಜ, ಸಂಪತ್ ಕುಮಾರ್ ಎಚ್.ಎಂ, ಇಕ್ಬಾಲ್ ಸುಣ್ಣ ಮೂಲೆ, ಅಶ್ರಫ್ ಹಾಜಿ ಗುಂಡಿ, ಅಬ್ದುಲ್ ಖಾದರ್ ಪಟೇಲ್, ಅಬ್ದುಲ್ ಕಲಾಂ ಸುಳ್ಯ, ಸಾಜಿದ್ ಐ.ಜಿ ಗೂನಡ್ಕ, ರಝಾಕ್ ಸೂಪರ್ ಕಲ್ಲುಗುಂಡಿ, ಎ.ಕೆ ಇಬ್ರಾಹಿಂ ಕಲ್ಲುಗುಂಡಿ, ಇರ್ಷಾದ್ ಬದ್ರಿಯಾ, ಎಸ್ ಪಿ ಅಬ್ದುರ್ರಹ್ಮಾನ್ ಸಂಪಾಜೆ, ರಫೀಕ್ ಪ್ರಗತಿ ಚಿಕನ್, ರಫೀಕ್ ಕರಾವಳಿ ಹೋಟೆಲ್ ಮುಂತಾದವರು ಉಪಸ್ಥಿತರಿದ್ದರು. ಎಂ.ಆರ್.ಡಿ.ಎ ಅಧ್ಯಕ್ಷರಾದ ಜಿ.ಕೆ ಹಮೀದ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್ ವಂದಿಸಿದರು.







