ಗಾಂಧಿನಗರ ಆಟೋ ಮಾಲಕರ ಚಾಲಕರ ಸಂಘದ ವತಿಯಿಂದ ಶರೀಫ್ ಕಂಠಿ ಗೆ ಸನ್ಮಾನ, ಮಂಜುನಾಥ್ ಭಂಡಾರಿಯವರಿಗೆ ಕೃತಜ್ಞತೆ…

ಎಲ್ಲರೊಡನೆ ಬೆರೆಯುವ ಗುಣ ಶರೀಫ್ ರಿಂದ ಕಲಿಯಬೇಕು :ಎನ್ ಎ. ರಾಮಚಂದ್ರ...

ಸುಳ್ಯ: ಗಾಂಧಿನಗರ ಗಾಂಧಿ ಪಾರ್ಕ್ ಬಳಿ ಸುಸಜ್ಜಿತ ವಾದ ಆಧುನಿಕ ಶೈಲಿಯ ಸರ್ವ ಋತು ಸುರಕ್ಷತೆಯ ಮಾಡು, ಸುಸಜ್ಜಿತ ಇಂಟರ್ ಲಾಕ್ ಅಳವಡಿಸಿದ ನೆಲ, ಉತ್ತಮ ಪಾರ್ಕಿಂಗ್ ಸೌಲಭ್ಯ ವನ್ನು ಒಳಗೊಂಡ ಆಟೋ ರಿಕ್ಷಾ ನಿಲ್ದಾಣ ವನ್ನು ವಿಧಾನ ಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿಯವರ ಅನುದಾನ, ನಗರ ಪಂಚಾಯತ್ ಸಹಕಾರವನ್ನು, ಸಂಪೂರ್ಣ ಸರ್ವ ಸನ್ನದ್ದ ವಾಗಿ ಲೋಕಾರ್ಪಣೆ ಗೊಳ್ಳುವ ವರೆಗೆ ಶ್ರಮ ವಹಿಸಿದ ಸುಳ್ಯ ನಗರ ಪಂಚಾಯತ್ ನಿಕಟ ಪೂರ್ವ ಸದಸ್ಯ ಶರೀಫ್ ಕಂಠಿ ಯನ್ನು ಆಟೋ ಮಾಲಕರ ಚಾಲಕರ ಪರವಾಗಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್ ಎ. ರಾಮಚಂದ್ರ ಸನ್ಮಾನಿಸಿದರು.
ಸಭೆಯಲ್ಲಿ ಮಾತನಾಡಿದ ಅವರು ಮಾತನಾಡಿದ ಜನ ಪ್ರತಿನಿಧಿಯೆoದರೆ ಶರೀಫ್ ನoತಿರಬೇಕು.ಎಲ್ಲರೊಡನೆ ಬೆರೆಯುವ ಗುಣ ಹೊಂದಿರಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ ಶಹೀದ್, ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫ, ತಹಶೀಲ್ದಾರ್ ಶ್ರೀಮತಿ ಮಂಜುಳಾ, ಶಾಹುಲ್ ಹಮೀದ್, ಪಿ ಸಿ ಜಯರಾಮ್
ಆಟೋ ರಿಕ್ಷಾ ಮಾಲಕರ ಚಾಲಕರ ಸಂಘ ದ ಪದಾಧಿಕಾರಿಗಳಾದ ರಾಧಾಕೃಷ್ಣ ಪರಿವಾರ ಕಾನ, ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button