ಗಾಂಧಿನಗರ ಮಸೀದಿ- ವಕ್ಫ್ ನಿಂದ 2 ನೇ ಕಂತಿನ ಅನುದಾನ ರೂ 5 ಲಕ್ಷ ಬಿಡುಗಡೆ…

ಸುಳ್ಯ: ಗಾಂಧಿನಗರ ಮುಹಿಯದ್ದೀನ್ ಜುಮಾ ಮಸ್ಜಿದ್ ತರ್ಬಿಯತುಲ್ ಇಸ್ಲಾಂ ಜಮಾಅತ್ ಕಮಿಟಿ ಗೆ ವಖ್ಫ್ ನಿಂದ ರೂ 10 ಲಕ್ಷ ಅನುದಾನ ದಫನ ಭೂಮಿ ( ಖಬರ್ ಸ್ಥಾನ ) ಆವರಣ ಗೋಡೆ ರಚನೆಗೆ ಈ ಹಿಂದೆಯೇ ಮಂಜೂರಾತಿ ಗೊಂಡು ರೂ 5 ಲಕ್ಷ ಬಿಡುಗಡೆ ಗೊಂಡಿರುತ್ತದೆ, ಇದೀಗ 2 ನೇ ಕಂತಿನ ಅನುದಾನ ರೂ 5 ಲಕ್ಷ ಬಿಡುಗಡೆ ಗೊಂಡಿರುತ್ತದೆ.
ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ರವರ ಶಿಫಾರಸ್ಸಿ ನಂತೆ ಅನುದಾನ ಬಿಡುಗಡೆ ಗೊಂಡಿರುತ್ತದೆ.