ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಇಬ್ಬರು ವಿದ್ಯಾರ್ಥಿಗಳಿಗೆ ಕರಾಟೆಯಲ್ಲಿ ಬಹುಮಾನ…

ಸುಳ್ಯ: ಉಡುಪಿಯ ಅಮೃತ್ ಗಾರ್ಡನ್ ನಲ್ಲಿ ನಡೆದ ಪ್ರವೀಣ್ ಕುಮಾರ್ ಮೆಮೋರಿಯಲ್ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಇಬ್ಬರು ವಿದ್ಯಾರ್ಥಿಗಳು ಬಹುಮಾನ ಗಳಿಸಿದ್ದಾರೆ.
ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ 6 ನೇ ತರಗತಿ ವಿದ್ಯಾರ್ಥಿ ಶರೀಫ್ ಹಾಗೂ ಅಸೀನಾ ದಂಪತಿಗಳ ಪುತ್ರ ಮಹಮ್ಮದ್ ಶಾಝಿಲ್ ಕಟಾ ಹಾಗೂ ಕುಮಟೆ ವಿಭಾಗಳೆರಡರಲ್ಲೂ ದ್ವಿತೀಯ ಪಡೆದಿದ್ದಾರೆ.
ಕಿಶೋರ್ ಬಿ. ಎಸ್ ಹಾಗೂ ಸವಿತಾ ದಂಪತಿಗಳ ಪುತ್ರ 5ನೇ ತರಗತಿ ತನ್ಮಯ ಬಿ. ಕೆ. ಕಟಾ ಹಾಗೂ ಕುಮಟೆ ವಿಭಾಗಳೆರಡರಲ್ಲೂ ದ್ವಿತೀಯ ಪಡೆದಿರುತ್ತಾರೆ.