SSF ಗೂನಡ್ಕ ಯುನಿಟ್ ಅರ್ಧ ವಾರ್ಷಿಕ ಕೌನ್ಸಿಲ್ Review ಕಾರ್ಯಕ್ರಮ…
ಸುಳ್ಯ: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಷನ್ SSF ಗೂನಡ್ಕ ಯುನಿಟ್ ಇದರ ಅರ್ಧ ವಾರ್ಷಿಕ ಕೌನ್ಸಿಲ್ review ಕಾರ್ಯಕ್ರಮವು SSF ಗೂನಡ್ಕ ಯುನಿಟ್ ಅಧ್ಯಕ್ಷರಾದ ಜಾಬಿರ್ ಎಮ್. ಬಿ ಗೂನಡ್ಕ ಇವರ ಅದ್ಯಕ್ಷತೆಯಲ್ಲಿ ಅಸರ್ ನಮಾಝಿನ ಬಳಿಕ ಸುನ್ನಿ ಸೆಂಟರ್ ಗೂನಡ್ಕದಲ್ಲಿ ನಡೆಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಿವಿಷನ್ ನಾಯಕರಾದ ಸ್ವಭಾಹ್ ಹಿಮಮಿ ಬೀಜಕೊಚ್ಚಿ, SYS ನಾಯಕರಾದ ಸಿದ್ದೀಕ್ ಕಟ್ಟೆಕ್ಕಾ ರ್ ಹಾಗೂ ಜಿಲ್ಲಾ ನಾಯಕರಾದ ಸಿದ್ದೀಕ್ ಗೂನಡ್ಕ, ಹಾಗೂ SSF ಗೂನಡ್ಕ ಯುನಿಟ್ ಮಾಜಿ ಅಧ್ಯಕ್ಷರಾದ ಹಾರಿಸ್ ಗೂನಡ್ಕ ಉಪಸ್ಥಿತರಿದ್ದರು. ಹಾಗೂ ಸೆಕ್ಟರ್ ವೀಕ್ಷಕರಾಗಿ SSF ಸುಳ್ಯ ಸೆಕ್ಷರ್ ಅಧ್ಯಕ್ಷರಾದ ಸಿದ್ದಿಕ್ ಬಿ. ಎ ಹಾಗೂ ಅಜೀಝ್ ಮಾಸ್ಟರ್ ಏಣಾವರ, ಹಾಗೂ ಇರ್ಫಾನ್ ಏಣಾವರ ರವರುಗಳು ಆಗಮಿಸಿದ್ದರು. ಈ ಒಂದು ಕಾರ್ಯಕ್ರಮದಲ್ಲಿ ಅರ್ಧ ವಾರ್ಷಿಕ ಅವಧಿಯಲ್ಲಿ ಯುನಿಟ್ ಕಾರ್ಯಕ್ರಮಗಳ ಕುರಿತು ಪುನರವಲೋಕನ ನಡೆಸಲಾಯಿತು. ಸ್ವಭಾಹ್ ಹಿಮಮಿ ಸಖಾಫಿ ಉಸ್ತಾದ್ ರವರುಗಳು ಸಂಘಟನೆ ಕಾರ್ಯಾಚರಣೆ ಪ್ರಾಮುಖ್ಯತೆ ಬಗ್ಗೆ ಪ್ರಾಸ್ತವಿಕವಾಗಿ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ SSF ಗೂನಡ್ಕ ಯುನಿಟ್ ಇದರ ಹಲವಾರು ಸದಸ್ಯರು ಭಾಗವಹಿಸಿದ್ದರು.