ಅಬುಸಾಲಿ ಗೂನಡ್ಕ ರವರ ಮನೆಗೆ ಸಹಾಯಕ ಕಮಿಷನರ್ ಗಿರೀಶ್ ನಂದನ್ ಭೇಟಿ ಕೊಟ್ಟು ಪರಿಶೀಲನೆ…

ಸುಳ್ಯ: ಭೂಕಂಪದಿಂದ ಹಾನಿಗೀಡಾದ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಅಬುಸಾಲಿ ಗೂನಡ್ಕರ ಮನೆಯನ್ನು ಸಹಾಯಕ ಕಮಿಷನರ್ ಗಿರೀಶ್ ನಂದನ್ ಪರಿಶೀಲನೆ ನಡೆಸಿದರು.
ನಂತರ ಜಿಲ್ಲಾ ಪಂಚಾಯತ್ ಇಂಜಿನಿಯರ್ ರವರಿಂದ ವರದಿ ತರಿಸಿ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಹಾಯಕ ಆಯುಕ್ತರು ತಿಳಿಸಿದರು. ಅಬುಸಾಲಿ ಗೂನಡ್ಕರವರಿಗೆ ಧೈರ್ಯ ತುಂಬಿ ಕೃಷಿ ಚಟುವಟಿಕೆಗಳ ಬಗ್ಗೆ ಅವರು ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಅನಿತಾಲಕ್ಷ್ಮಿ, ಕಂದಾಯ ನೀರಿಕ್ಷಕ ಕೊರಗಪ್ಪ ಹೆಗ್ಡೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ,ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಎಮ್. ಶಾಹಿದ್ ತೆಕ್ಕಿಲ್, ಗ್ರಾಮ ಕರಣಿಕ ಮಿಯಸಾಬ್ ಮುಲ್ಲಾ ,ಗ್ರಾಮ ಪಂಚಾಯತ್ ಸದಸ್ಯರುಗಳಾದ ಜಗದೀಶ್ ರೈ, ಎಸ್. ಕೆ. ಹನೀಫ್,ವಿಜಯ ಅಲಡ್ಕ ಸೊಸೈಟಿ ನಿರ್ದೇಶಕ ರಾದ ಗಣಪತಿ ಭಟ್ ಪಿ. ಎನ್, ಸಜ್ಜನ ಪ್ರತಿಷ್ಠಾನದ ರಹೀಮ್ ಬೀಜದಕಟ್ಟೆ, ಸಿ ಎಂ ಅಬ್ದುಲ್ಲ ಚೆರೂರ್ ಮೊದಲಾದವರು ಉಪಸ್ಥಿತರಿದ್ದರು.