ಕೇಂದ್ರ ಸರಕಾರದ ಜನಪರ ಯೋಜನೆಗಳು ಮನೆಮನೆ ತಲಪಲಿ- ಮಾಧವ ಮಾವೆ…

ಬಂಟ್ವಾಳ:ಸರಕಾರದಿಂದ ಸಿಗುವ ಸವಲತ್ತುಗಳನ್ನು ಬಡವರ ಮನೆಗೆ ತಿಳಿಸುವ ಕಾರ್ಯ ವನ್ನು ಕಾರ್ಯಕರ್ತರು ಮಾಡುವ ಮೂಲಕ ಪಕ್ಷ ಸಂಘಟನೆಯನ್ನು ಬಲಪಡಿಸಬೇಕು.ಕೇಂದ್ರ ಸರಕಾರದ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿಪರ ಯೋಜನೆಗಳಿಂದ ರಾಷ್ಟ್ರದ ಅಭಿವೃದ್ಧಿಯೊಂದಿಗೆ ಜನಜೀವನಮಟ್ಟ ಸುಧಾರಿಸುತ್ತಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಮಾಧವ ಮಾವೆ ಹೇಳಿದರು.
ಅವರು ಬಿಜೆಪಿ ಬಂಟ್ವಾಳ ಮಂಡಲದ ಪೆರಾಜೆ ಶಕ್ತಿ ಕೇಂದ್ರದಿಂದ ಪೆರಾಜೆ ಶ್ರೀ ರಾಮಚಂದ್ರಾಪುರಮಠದ ಸಭಾಂಗಣದಲ್ಲಿ ಏರ್ಪಡಿಸಲಾದ ಕಾರ್ಯಕರ್ತರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.
ಪೆರಾಜೆ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾಣಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಅರವಿಂದ‌ ರೈ , ಬಂಟ್ವಾಳ ಮಂಡಲ‌ ಅಭ್ಯಾಸ ವರ್ಗ ಸಂಚಾಲಕ ಹರೀಶ ಶೆಟ್ಟಿ,ಗ್ರಾಮ ಪಂಚಾಯತ್ ಸದಸ್ಯರಾದ ರಾಜಾರಾಮ ಕಾಡೂರು,ಹರೀಶ ರೈ ಪಾಣೂರು,ಮಮತಾ ತಿಲಕ ಗೌಡ ಉಪಸ್ಥಿತರಿದ್ದರು.
ಹಿರಿಯ ಸಹಕಾರಿ ಧುರೀಣ ಬಿ.ಟಿ.ನಾರಾಯಣ ಭಟ್ ದೀಪಬೆಳಗಿಸಿ ಚಾಲನೆ ನೀಡಿದರು. ಮಂಡಲ ಕಾರ್ಯದರ್ಶಿ ರವೀಶ ಶೆಟ್ಟಿ ಕರ್ಕಳ ಉದ್ಘಾಟನಾ ಭಾಷಣ ಮಾಡಿದರು. ಬಿಜೆಪಿ ನಾಯಕರಾದ ಸಂದೀಪ್ ಶೆಟ್ಟಿ ಅರೆಬೆಟ್ಟು,ಶಿವಪ್ರಸಾದ ಶೆಟ್ಟಿ, ಸುಲೋಚನಾ ಜಿ.ಕೆ.ಭಟ್ ಕಾರ್ಯಕರ್ತರಿಗೆ ಮಾಹಿತಿ ನೀಡಿದರು. ಬೂತ್ ಸಮಿತಿ‌ ಅಧ್ಯಕ್ಷರಾದ ಗಣೇಶ ಕೊಂಕಣ ಪದವು,ಲೋಹಿತ್ ಮಂಜೊಟ್ಟಿ,ಪುರುಷೋತ್ತಮ ಮಡಲ ವಿವಿಧ ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿಯ ಪ್ರಮುಖರಾದ ದೇವಪ್ಪ ಪೂಜಾರಿ, ಸುದರ್ಶನ ಬಜ,ಹಿರಿಯ ಕಾರ್ಯಕರ್ತ ರಾದ ರಾಮಣ್ಣ ಗೌಡ ದೆಪ್ಪೊಳಿ,ಸೀತಾರಾಮ ನಾಯ್ಕ ಪಾಳ್ಯ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಕ್ತಿಕೇಂದ್ರ
ಅಭ್ಯಾಸ ವರ್ಗದ ಸಂಚಾಲಕ ಉಮೇಶ ಎಸ್ಪಿ ಸ್ವಾಗತಿಸಿದರು.ಯತಿರಾಜ ಪಿ.ನಿರೂಪಿಸಿದರು.

whatsapp image 2025 09 07 at 7.28.54 pm (1)

whatsapp image 2025 09 07 at 7.28.55 pm

Related Articles

Back to top button