ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪನಡು -ಆಮಂತ್ರಣ ಪತ್ರ ಬಿಡುಗಡೆ…

ಬಂಟ್ವಾಳ: ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪನಡು ಇದರ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಸುಬ್ರಹ್ಮಣ್ಯ ಷಷ್ಠಿ ವರ್ಷಾವಧಿ ಪೂಜಾ ಉತ್ಸವ ಆಮಂತ್ರಣ ಪತ್ರವನ್ನು ಅ.20 ರಂದು ಶ್ರೀ ದೇವಾಲಯದ ಸನ್ನಿಧಾನದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಮಣ್ಯ ಭಟ್ ಬಿಡುಗಡೆಗೊಳಿಸಿದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಗಡಿ ಪ್ರಧಾನರಾದ ಮುಂಡಪ್ಪ ಶೆಟ್ಟಿ ಯಾನೆ ಕೋಚ್ ಬಂಡಾರಿ, ರವೀಂದ್ರನಾಥ್ ಭಂಡಾರಿ, ಪುಣ್ಕೆ ಮಜಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜ, ರೋಹಿತ್ ಶೆಟ್ಟಿ ನಗ್ರಿ ಗುತ್ತು, ಮಿತೋಟ ಪದ್ಮನಾಭ ಭಟ್, ಶಿವರಾಮ ಭಂಡಾರಿ, ಕೆ ರಾಧಾಕೃಷ್ಣ ಆಳ್ವ, ಎಸ್ ಶ್ರೀಕಾಂತ ಶೆಟ್ಟಿ, ಗಣಪತಿ ಭಟ್, ಯಶೋಧರರೈ, ಯತೀಶ್ ಭಂಡಾರಿ, ರಾಮಕೃಷ್ಣ ಭಟ್, ಪ್ರವೀಣ್ ಆಳ್ವ, ಆನಂದ ರೈ, ಪ್ರದೀಪ್ ಶೆಟ್ಟಿ, ಕಿಶನ್ ಶೇಣವ, ಸಜೀಪ ನಡು ಗ್ರಾಮ ಪಂಚಾಯತ್ ಅಧ್ಯಕ್ಷ ವಿಠಲ ಅಮೀನ್, ಯಶವಂತ ದೇರಾಜೆ ಗುತ್ತು, ಗೀತಾ ನಾಯಕ್, ಬಾಬು ಪೂಜಾರಿ, ಹರೀಶ್ ಬಂಗೇರ, ಸುರೇಶ್ ಬಂಗೇರ, ಶುಭೋದ ಆಳ್ವ, ಭಕ್ತ ಕುಮಾರ್ ಶೆಟ್ಟಿ, ಶರತ್, ಸೋಮನಾಥ ಬಂಡಾರಿ, ಶುಭಾಷ್ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button