ಶಿಷ್ಯರ ನಡೆ ಗುರುವಿನ ಕಡೆ- ಶಿಕ್ಷಕರ ದಿನಾಚರಣೆಯ ವಿಶೇಷ ಕಾರ್ಯಕ್ರಮ ದಲ್ಲಿ ವಿಶ್ರಾಂತ ಪ್ರೊಫೆಸರ್ ನಿಂಗೇ ಗೌಡರಿಗೆ ಸನ್ಮಾನ…

ಸುಳ್ಯ: ಭಾರತದ ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನದ ಹಿನ್ನಲೆಯಲ್ಲಿ ಆಚರಿಸುವ ಶಿಕ್ಷಕರ ದಿನಾಚರಣೆಯಯಂದು ಸುಳ್ಯ ನೆಹರೂ ಸ್ಮಾರಕ ಮಹಾ ವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳು 4 ನೇ ವರ್ಷದ ಶಿಷ್ಯರ ನಡೆ ಗುರುಗಳ ಕಡೆ ಕಾರ್ಯಕ್ರಮವನ್ನು ಎನ್ನೆoಸಿ ಯಲ್ಲಿ ರಾಜಕೀಯ ಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರೊ.ನಿಂಗೇ ಗೌಡರ ಸುಳ್ಯ ಹಳೆಗೇಟು ನಿವಾಸದಲ್ಲಿ ಜರಗಿತು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ನಿಂಗೇ ಗೌಡರ ಶಿಷ್ಯoದಿರು ಒಟ್ಟು ಗೂಡಿ ಅವರ ನಿವಾಸಕ್ಕೆ ತೆರಳಿ ಹಳೆಯ ಅನುಭವಗಳನ್ನು ಮೆಲುಕು ಹಾಕಿ ನಿಂಗೇ ಗೌಡ ದಂಪತಿಗಳನ್ನು ಸನ್ಮಾನಿಸಿ ಆಶೀರ್ವಾದ ಪಡೆದು ನಿರ್ಗಮಿಸಿದರು.
ಪ್ರಾರಂಭ ದಲ್ಲಿ ದಿನೇಶ್ ಮಡಪ್ಪಾಡಿ ಸ್ವಾಗತಿಸಿ, ವಿಷಯ ಪ್ರಸ್ತಾವನೆ ಗೈದರು.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಚಂದ್ರ ಶೇಖರ ಪೆರಾಲು ಮಾತನಾಡಿ ಇಂದು ಸುಳ್ಯದಲ್ಲಿ ವಿವಿಧ ಕ್ಷೇತ್ರ ಗಳ, ವಿವಿಧ ಧರ್ಮಗಳ ಮಿತ್ರರು ಒಂದುಗೂಡಿ ಸಮಾನ ಮನಸ್ಕರಾಗಿ ಬೆರೆಯುತ್ತಿದ್ದರೆ ಅದು ನಮ್ಮ ಗುರುಗಳ ಕೊಡುಗೆ ಸಂಸ್ಕಾರ ಯುತ ಶಿಕ್ಷಣ ಪಡೆದಾಗ ವ್ಯಕ್ತಿ ಸಮಾಜ ಮುಖಿಯಾಗಿ ಬೆಳೆಯಲು ಸಾಧ್ಯ ಎಂದರು.
ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಶುಭಾಶoಶನೆ ಮಾಡಿದರು.
ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಟಿ. ಎಂ. ಶಹೀದ್, ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್, ಕೆಫೆಕ್ ನಿಗಮ ಮಾಜಿ ನಿರ್ದೇಶಕ ಪಿ. ಎ. ಮಹಮ್ಮದ್, ಕೆವಿಜಿ ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ಕೆ. ಟಿ. ವಿಶ್ವನಾಥ್, ಸಿ. ಎ. ಬ್ಯಾಂಕ್ ನಿರ್ದೇಶಕ, ಅರೆಭಾಷೆ ಅಕಾಡೆಮಿ ಸದಸ್ಯರುಗಳಾದ ಶ್ರೀಮತಿ ಚಂದ್ರಮತಿ,ಶ್ರೀಮತಿ ಲತಾ ಕುದ್ಪಾಜೆ, ಯತಿ ರಾಜ ಭೂತ ಕಲ್ಲು, ಪುರುಷೋತ್ತಮ ಕೋಲ್ಚಾರ್ ಸುದರ್ಶನ್ ಕೊಯಿಂಗೋಡಿ, ರಾಕೇಶ್ ಕುoಟಿಕಾನ , ಅಂಬೆಕಲ್ಲು, ನಿಂಗೇ ಗೌಡರ ಪುತ್ರ ಭಾನು ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು
ನಿಂಗೇ ಗೌಡ ದಂಪತಿ ಗಳನ್ನು ಶಿಷ್ಯ ವರ್ಗ ಸನ್ಮಾನಿಸಿ, ಶುಭ ಹಾರೈಸಿದರು.

Related Articles

Back to top button