ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪನಡು – ವಿವಿಧ ಧಾರ್ಮಿಕ ಕಾರ್ಯಕ್ರಮಗಳು…

ಬಂಟ್ವಾಳ: ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪನಡು ಇದರ ಜೀರ್ಣೋದ್ಧಾರದ ಅಂಗವಾಗಿ ದೇವಾಲಯದ ನೈಋತ್ಯ ಭಾಗದಲ್ಲಿ ನೂತನ ಶಿಲಾಮಯ ಆರೂಢ ನಿರ್ಮಾಣಗೊಂಡು ಶ್ರೀ ಶಾಸ್ತಾರ ದೇವರ ಪುನಃಪ್ರತಿಷ್ಠಾಪನೆ ಕಲಶಾಭಿಷೇಕ, ವಾಸ್ತು ರಕ್ಷೋಘ್ನ ಹೋಮ, ವಾಸ್ತು ಬಲಿ, ಗಣಹೋಮ, ಪ್ರತಿಷ್ಠಾ ಹೋಮ, ಕಲ್ಪೋಕ್ತ ಪೂಜೆ, ಪ್ರಸನ್ನ ಪೂಜೆ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಶ್ರದ್ದಾ ಭಕ್ತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜ. 17 ರಂದು ನೆರವೇರಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುoಜ ವೆಂಕಟೇಶ್ವರ ಭಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ ರಾಧಾಕೃಷ್ಣ ಆಳ್ವ, ಯಶವಂತ ದೇರಾಜೆ ಗುತ್ತು, ಕೆ ಟಿ ಸುಧಾಕರ, ರಾಮಕೃಷ್ಣ ಭಟ್, ಪ್ರವೀಣ್ ಆಳ್ವ, ಸತ್ಯನಾರಾಯಣ ನಾಯಕ್, ಪ್ರವೀಣ್ ಶೆಟ್ಟಿ, ಪ್ರವೀಣ್ ಭಂಡಾರಿ, ಶಿವರಾಮ ಬಂಡಾರಿ, ರಮಾ ಎಸ್ ಭಂಡಾರಿ , ಸುರೇಶ್ ಬಂಗೇರ, ಹರೀಶ್ ಬಂಗೇರ, ಕೋಚು ಪೂಜಾರಿ, ಭಕ್ತ ಕುಮಾರ್ ಶೆಟ್ಟಿ, ಸುಭಾಷ್, ಕಿಶನ್ ಶೇಣವ, ಗಣಪತಿ ಭಟ್ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button