ಶ್ರೀ ಶಾರದಾಂಬಿಕ ಭಜನಾ ಮಂದಿರ ಶಾರದಾನಗರ – ಧಾರ್ಮಿಕ ಸಭೆ…

ಬಂಟ್ವಾಳ: ಶ್ರೀ ಶಾರದಾಂಬಿಕ ಭಜನಾ ಮಂದಿರ ಶಾರದಾ ನಗರ ಸಜೀಪ ಮುನ್ನೂರು 65ನೆಯ ವಾರ್ಷಿಕ ಏಕಾಹ ಭಜನಾ ಮಹೋತ್ಸವದ ಅಂಗವಾಗಿ ಜರಗಿದ ಧಾರ್ಮಿಕ ಸಭೆಯನ್ನು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು.
ಉದ್ಯಮಿ ಎಂ ಮಹಾಬಲ ಕೊಟ್ಟಾರಿ, ಸತೀಶ ಗಟ್ಟಿ, ಪದ್ಮನಾಭ ಕೊಟ್ಟಾರಿ, ಸೋಮಶೇಖರ, ನಾರಾಯಣ ಐತಾಳ, ವಿ ತಿಮ್ಮಪ್ಪ ಕುಲಾಲ, ವಿಶ್ವ ಹಿಂದೂ ಪರಿಷತ್ ಮುಖಂಡ ನರಸಿಂಹ ಮಾಣಿ , ಸೇವಾ ನಿರತೆ ಶೀಲತಾ, ಪಂಚಾಯಿತಿ ಸದಸ್ಯರಾದ ಸರೋಜಿನಿ, ದಯಾಲಕ್ಷ್ಮಿ, ಸುಂದರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.