ರೋಟರಿ ಕ್ಲಬ್ ಬಂಟ್ವಾಳದಿಂದ ಬಿ.ಮೂಡ ಪ್ರಾಥಮಿಕ ಶಾಲೆ ಗೌರವ ಶಿಕ್ಷಕರ ವೇತನ ಹಸ್ತಾಂತರ…

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ವತಿಯಿಂದ ಬಿ.ಸಿ.ರೋಡ್ ನ ಅಜ್ಜಿಬೆಟ್ಟು ವಿನಲ್ಲಿರುವ ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೌರವ ಶಿಕ್ಷಕರ ವೇತನ ಮೊತ್ತ ಹಸ್ತಾಂತರಿಸಲಾಯಿತು.
ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಪ್ರಕಾಶ್ ಬಾಳಿಗಾ ಅವರು ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ಅವರಿಗೆ ನೆರವು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕೋಶಾಧಿಕಾರಿ ಸಂದೀಪ್ ಮಿನೇಜಸ್, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹರೀಶ ಮಾಂಬಾಡಿ, ಸಹಶಿಕ್ಷಕರಾದ ತಾಹಿರಾ, ಸುಶೀಲಾ, ಹೇಮಾವತಿ, ಅತಿಥಿ ಶಿಕ್ಷಕರಾದ ನಿಶ್ಮಿತಾ, ಗೌರವ ಶಿಕ್ಷಕಿಯರಾದ ಪೂರ್ಣಿಮಾ ಮತ್ತು ಲಾವಣ್ಯ ಉಪಸ್ಥಿತರಿದ್ದರು. ಪ್ರತಿ ವರ್ಷ ಓರ್ವ ಗೌರವ ಶಿಕ್ಷಕರಿಗೆ ರೋಟರಿ ಕ್ಲಬ್ ಬಂಟ್ವಾಳ ವೇತನ ನೀಡುವುದರ ಮೂಲಕ ಶಾಲೆಯ ಶೈಕ್ಷಣಿಕ ಪ್ರಗತಿಗೆ ನೆರವಾಗುತ್ತಿದೆ.