ಸಾಮಾಜಿಕ ಜಾಲತಾಣಗಳಲ್ಲಿನ ಚರ್ಚೆಗಳಿಂದ ಕಾರ್ಯಕರ್ತರು ದೂರವಿರಿ ಎಸ್ ಕೆ ಎಸ್ ಎಸ್ ಎಫ್ ಜಿಲ್ಲಾ ನಾಯಕ ತಾಜುದ್ದೀನ್ ಟರ್ಲಿ…

ಸುಳ್ಯ: ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಚರ್ಚೆಗಳಿಂದ ಎಸ್ ಕೆ ಎಸ್ ಎಸ್ ಎಫ್ ಕಾರ್ಯಕರ್ತರು ದೂರವಿರಿ. ಪರ,ವಿರೋಧ ಚರ್ಚೆಗಳಿಂದ ಯಾವುದೇ ಲಾಭವಿಲ್ಲ. ಅದು ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರಲಿದೆ. ಊರಿನ ಸಾರ್ವಜನಿಕ ವಲಯದಲ್ಲಿ ಸರ್ವ ಧರ್ಮದೊಂದಿಗೆ ಬೆರೆತು ಜೀವಿಸಿ ಎಂದು ಎಸ್ ಕೆ ಎಸ್ ಎಸ್ ಎಫ್ ಈಸ್ಟ್ ಜಿಲ್ಲಾ ಕೌನ್ಸಿಲರ್ ತಾಜುದ್ದೀನ್ ಟರ್ಲಿ ಕಾರ್ಯಕರ್ತರಿಗೆ ಕರೆ ನೀಡಿದರು.
ಎಸ್ ಕೆ ಎಸ್ ಎಸ್ ಎಫ್ ಅಡ್ಕ ಇರುವಂಬಳ್ಳ ಝೈನೀಯ ಕ್ಯಾಂಪಸ್ ನಲ್ಲಿ ಆಯೋಜಿಸಿದ್ದ ಮನಸನ್ನದ್ಧತೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಬರುವ ಚಟುವಟಿಕೆಗಳ ತುಣುಕುಗಳಲ್ಲಿ ಲೈಕ್ , ಕಮೆಂಟ್ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಹೊರತು ಕಾನೂನು ಕ್ರಮ ಎದುರಿಸುವ ಸಾಧ್ಯತೆ ಇರುವುದರಿಂದ ನಾವು ದೂರವಿರಬೇಕೆಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಕೆ ಎಸ್ ಎಸ್ ಎಫ್ ಶಾಖಾ ಅಧ್ಯಕ್ಷರಾದ ಸಿದ್ದೀಕ್ ಅಡ್ಕ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಝೈನೀಯಾ ಪ್ರಾಂಶುಪಾಲರಾದ ಅಬ್ದುಲ್ಲ ನಿಝಾಮಿ ನೆರವೇರಿಸಿದರು. ಹಿರಿಯ ಉಲಮಾ ನೇತಾರರಾದ ಜಿ ಎಸ್ ಮಹಮ್ಮದ್ ಮದನಿ ಆತ್ಮಸಂಸ್ಕರಣೆ ವಿಷಯದಲ್ಲಿ ಅರಿವು ಮೂಡಿಸಿದರು. ವೇದಿಕೆಯಲ್ಲಿ ಸುಳ್ಯ ರೇಂಜ್ ಮದ್ರಸ ಮೇನೇಜ್ ಮೆಂಟ್ ಕೋಶಾಧಿಕಾರಿ ಹಸೈನಾರ್ ಧರ್ಮತಣ್ಣಿ, ಇರುವಂಬಳ್ಳ ಜಮಾಹತ್ ಕಾರ್ಯದರ್ಶಿ ಮಹಮ್ಮದ್ ಕುಂಞಿ ತುಪ್ಪಕಲ್ಲು, ಅಲ್ ಅಮೀನ್ ಅಧ್ಯಕ್ಷರಾದ ಶಾಫಿ ಕೆ ಎಂ ಹಾಗೂ ಊರಿನ ಗಣ್ಯ ವ್ಯಕ್ತಿಗಳು , ಸಮಸ್ತ ಕಾರ್ಯಕರ್ತರು ಉಪಸ್ಥಿತರಿದ್ದರು. ಶಾಖಾ ಕಾರ್ಯದರ್ಶಿ ಸಿದ್ದೀಕ್ ಬೊವಿಕ್ಕಾನ ಸ್ವಾಗತಿಸಿ, ವಂದಿಸಿದರು.