ಬಾಬಾ ರಾಮದೇವ್ ವಿರುದ್ಧ ದೇಶದ್ರೋಹ ಕೇಸು ಹಾಕುತ್ತಾರೆಯೇ? – ವೆಂಕಪ್ಪ ಗೌಡ ಪ್ರಶ್ನೆ…

ಸುಳ್ಯ: ಬಾಬಾ ರಾಮದೇವ್ ಅವರು ಅಲೋಪತಿ ವೈದ್ಯ ಪದ್ಧತಿ ಮೂರ್ಖ ವಿಜ್ಞಾನ , ಅಲೋಪತಿ ಚಿಕಿತ್ಸೆಯಿಂದಲೇ ಜನ ಸತ್ತಿರೋದು ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಇಡೀ ವೈದ್ಯಲೋಕವನ್ನೇ ಅವಮಾನಿಸಿದ್ದಾರೆ. ಈ ಹೇಳಿಕೆ ನಿಜವಾದ ದೇಶವಿರೋಧದ ಹೇಳಿಕೆಯಾಗಿದೆ. ಈ ಹೇಳಿಕೆಯಿಂದಾಗಿ ಕೊರೋನಾ ಲಸಿಕೆ ಬಗ್ಗೆ ದೇಶದ ಜನತೆಯನ್ನು ತಪ್ಪುದಾರಿಗೆ ಎಳೆದಂತಾಗಿದೆ. ಇಂತಹ ಹೇಳಿಕೆ ನೀಡಿದ ಬಿಜೆಪಿ ಮಿತ್ರ ಎಂದೇ ಪರಿಗಣಿಸಲ್ಪಡುವ ಬಾಬಾ ರಾಮದೇವ್ ವಿರುದ್ದ ಕೇಂದ್ರ ಸರಕಾರ ದೇಶದ್ರೋಹದ ಕೇಸು ಹಾಕುತ್ತದೆಯೇ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ ಪ್ರಶ್ನಿಸಿದ್ದಾರೆ.
ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಉದ್ದೇಶದಿಂದ ಲಸಿಕೆ ಬಗ್ಗೆ ಕಾಂಗ್ರೆಸ್ ಪಕ್ಷದವರು ಅಪಪ್ರಚಾರ ಮಾಡಿದ್ದಾರೆ ಎಂದು ಬೊಬ್ಬಿಡುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಮತ್ತಿತರ ಬಿಜೆಪಿ ನಾಯಕರಿಗೆ ಬಾಬಾ ರಾಮದೇವ್ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ತಾಕತ್ತಿದೆಯೇ ಎಂದು ಕೂಡ ಎಂ. ವೆಂಕಪ್ಪ ಗೌಡ ಪತ್ರಿಕಾ ಪ್ರಕಟಣೆಯ ಮೂಲಕ ಪ್ರಶ್ನಿಸಿದ್ದಾರೆ.

Sponsors

Related Articles

Back to top button