ಮಕ್ಕಳ ದಿನಾಚರಣೆ-ಕಾವ್ಯ ಗಣೇಶ್ ಆಚಾರ್ಯ ಸುಳ್ಯ ಇವರಿಗೆ ಪ್ರತಿಭಾ ಪುರಸ್ಕಾರ…

ಸುಳ್ಯ: ಮಕ್ಕಳ ದಿನಾಚರಣೆ ಪ್ರಯುಕ್ತ ಸುಳ್ಯದ ಹಿರಿಯ ಹಾಡುಗಾರ ಬಿ ಎಸ್ ಗಣೇಶ್ ಆಚಾರ್ಯ ಅವರ ಪುತ್ರಿ, ಯುವ ಗಾಯಕಿ ಕಾವ್ಯ ಗಣೇಶ್ ಆಚಾರ್ಯ ಸುಳ್ಯ ಇವರಿಗೆ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅವರ ಪ್ರತಿಭೆಯನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಈ ಸಂದರ್ಭದಲ್ಲಿ ನ. ಪಂ. ಸದಸ್ಯರಾದ ರಿಯಾಜ್ ಕಟ್ಟೆಕಾರ್, ಗಣೇಶ್ ಆಚಾರ್ಯ , ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ಮುರಳಿ ಚೊಕ್ಕಾಡಿ, ಸುಳ್ಯ ತಾಲೂಕು ಅರೋಗ್ಯ ರಕ್ಷಾ ಸಮಿತಿ ಸದಸ್ಯ ಶಹೀದ್ ಪಾರೆ ಮುಂತಾದವರು ಉಪಸ್ಥಿತರಿದ್ದರು.