ಗ್ರಾಮ ಪಂಚಾಯತ್ ಸಂಪಾಜೆ-ವಿವಿಧ ಸವಲತ್ತು ವಿತರಣೆ ಹಾಗೂ ತರಬೇತಿ ಕಾರ್ಯಕ್ರಮ…

ಸುಳ್ಯ:ಕೃಷಿ ಇಲಾಖೆ ಮಂಗಳೂರು, ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ಸಂಪಾಜೆ, ಕೃಷಿ, ತೋಟಗಾರಿಕೆ ಇಲಾಖೆ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ವಿವಿಧ ಸವಲತ್ತು ವಿತರಣೆ ಹಾಗೂ ತರಬೇತಿ ಕಾರ್ಯಕ್ರಮ ಗ್ರಾಮ ಪಂಚಾಯತ್ ಸಂಪಾಜೆ ಇದರ ಸಭಾ ಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿ ವೇಲು ಅಧ್ಯಕ್ಷತೆಯಲ್ಲಿ ನಡೆಯಿತು.
ಅತಿಥಿಗಳಾದ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಡಾಕ್ಟರ್ ಟಿ ಜೆ ರಮೇಶ್ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು ಪ್ರಾಸ್ತಾವಿಕವಾಗಿ ಮಾತನಾಡಿ ಕೃಷಿ ವಿಜ್ಞಾನ ಕೇಂದ್ರದಿಂದ ಪರಿಶಿಷ್ಟ ಜಾತಿ ರೈತರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. NRLM ಸಂಜೀವಿನಿ ಒಕ್ಕೂಟದ ಕೃಷಿ ಸಖಿಯರ ಮೂಲಕ ಯೋಜನೆಗಳು ಕೃಷಿಕರಿಗೆ ತಲುಪುತ್ತಿದ್ದು NRLM ಸುಳ್ಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ವೇತಾರವರು ಕೃಷಿ ಸಖಿಯರಿಗೆ ಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಡಾ. ಹರೀಶ್ ಶೆಣೈ ವಿಜ್ಞಾನಿ ಬೇಸಾಯ ಶಾಸ್ತ್ರ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಎರೆಹುಳ ಗೊಬ್ಬರ ತಯಾರಿಕೆಯ ಬಗ್ಗೆ ಮಾಹಿತಿ ನೀಡಿದರು.
ಡಾ. ಕೇದಾರನಾಥ್ ವಿಜ್ಞಾನಿ ಸಸ್ಯ ಸಂರಕ್ಷಣೆ ಇವರು ಬೋರ್ಡೋ ದ್ರಾವಣ ತಯಾರಿಕೆ ಹಾಗೂ ಸಸ್ಯ ಕೃಷಿ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.
ಶ್ರೀ ರಾಜಣ್ಣ ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ್ ಸುಳ್ಯ ಇವರು ಕೃಷಿ ವಿಜ್ಞಾನ ಕೇಂದ್ರದಿಂದ NRLM ತಾಲೂಕು ಸಂಜೀವಿನಿ ಒಕ್ಕೂಟದ ಕೃಷಿ ಸಖಿಯರ ಮುಖಾಂತರ ಸಿಗುತ್ತಲಿರುವ ಸೌಲಭ್ಯಗಳ ಬಗ್ಗೆ ಹಾಗೂ ಸಂಪಾಜೆ ಗ್ರಾಮ ಪಂಚಾಯತ್ ಮತ್ತು ಜನರ ನಡುವಿನ ಹೊಂದಾಣಿಕೆ, ಗ್ರಾಮದ ಅಭಿವೃದ್ದಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಶ್ರೀಮತಿ ಶ್ವೇತಾ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಸಂಜೀವಿನಿ ಒಕ್ಕೂಟದ ಮುಖಾಂತರ ಮಹಿಳೆಯರಿಗೆ ಸಿಗುತ್ತಿರುವ ಸೌಲಭ್ಯಗಳು, ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಕೆ. ಹನೀಫ್, ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಗಳಾದ ಜಿ. ಕೆ.ಹಮೀದ್ ಗೂನಡ್ಕ, ಸುಂದರಿ ಮುಂಡಡ್ಕ , ಸದಸ್ಯರುಗಳಾದ ವಿಮಲಾ ಪ್ರಸಾದ್, ಅನುಪಮ, ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ತಾಲೂಕು ಸಾoಯೋಜಕಿ ನಮಿತಾ ಹಾಗೂ ಇಂಜಿನಿಯರ್ ಸುಧಾಮ ಮಾಹಿತಿ ನೀಡಿದರು ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶಿಲ್ಪಾ ಸನತ್,ಉಪಸ್ಥಿತರಿದ್ದರು.ಈ ಕಾರ್ಯಕ್ರಮದ ಜೊತೆಗೆ ಮಹಿಳಾ ಗ್ರಾಮ ಸಭೆ ನಡೆಯಿತು. ಗ್ರಾಮ ಸಭೆಯಲ್ಲಿ ರಾಜರಾಂಪುರ ಅಂಗನವಾಡಿ ಕೇಂದ್ರದ ನಿವೃತ ಅಂಗನವಾಡಿ ಕಾರ್ಯಕರ್ತೆ ಜಯಂತಿ ಯವರಿಗೆ ಬೀಳ್ಕೊಡುವ ಕಾರ್ಯಕ್ರಮ ನಡೆಯಿತು
ವಿವಿಧ ಇಲಾಖೆಯ ಜಂಟಿ ಕಾರ್ಯಕ್ರಮದಲ್ಲಿ ಪ. ಜಾತಿ ಪ. ಪಂಗಡದ ಫಲಾನುಭವಿಗಳಿಗೆ ಡ್ರಮ್,ಟಾರ್ಪಲು ವಿತರಿಸಲಾಯಿತು.
ಗ್ರಾಮ ಪಂಚಾಯತ್ ವತಿಯಿಂದ ಗ್ರಾಮದ ಮಹಿಳೆಯರಿಗಾಗಿ ಕ್ರೀಡಾಕೂಟ ವಿವಿಧ ಆಟೋಟ ಕಾರ್ಯಕ್ರಮ ನಡೆಸಲಾಗಿದ್ದು ವಿಜೇತರಿಗೆ ಬಹುಮಾನ ನೀಡಲಾಯಿತು. ಇದೆ ವೇದಿಕೆಯಲ್ಲಿ ಸಸಿ ವಿತರಣೆ ಕಾರ್ಯಕ್ರಮ ನಡೆಯಿತು
ಸಭೆಯಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರುಗಳಾದ ಜಗದೀಶ್ k p ಯಮುನ ಅಂಗನವಾಡಿ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಚಿತ್ರಾ,ಉಪಸ್ಥಿತರಿದ್ದರು,
ಪಂಚಾಯತ್ ಅಬಿವೃದ್ದಿ ಅಧಿಕಾರಿ ಸರಿತಾ ಡಿಸೋಜಾ ಸರ್ವರನ್ನು ಸ್ವಾಗತಿಸಿದರು ಶ್ರೀಮತಿ ಧರ್ಮಕಲ ಅಂಗನವಾಡಿ ಟೀಚರ್ ಇವರು ಧನ್ಯವಾದ ಅರ್ಪಿಸಿದರು ಹಾಗೂ ನಿರೂಪಣೆಯನ್ನು ಕೃಷಿ ಸಖಿ ಮೋಹಿನಿ( ನಿಶಾ ) ವಿಶ್ವನಾಥ್ ಮಾಡಿದರು. ಯಶೋದಾ ಪೇರಡ್ಕ ಪ್ರಾರ್ಥನೆ ಮಾಡಿದರು
ಭಾಗವಹಿಸಿದ ಪ್ರತಿಯೊಬ್ಬರಿಗೂ, ಊಟ , ಚಹಾ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಕೃಷಿ ಸಕಿ ಮೋಹಿನಿ ಪೇರಡ್ಕ ರವರಿಗೆ ಗಿಡ ಹಾಗೂ ಸ್ಮರಣಿಕೆ ನೀಡಲಾಯಿತು. ಶ್ರೀ ಮತಿ ಕಾಂತಿ ಯಾವರ ಪರವಾಗಿ ಒಕ್ಕೂಟದ ಸೌಮ್ಯ ಸ್ಮರಣಿಕೆ ಸ್ವೀಕರಿಸಿದರು .ಲೀಲಾವತಿ ಪೇಳ್ತಡ್ಕ ರವರಿಗೆ ಉತ್ತಮ ಮಲ್ಲಿಗೆ ಕೃಷಿಗಾಗಿ ಸ್ಮರಣಿಕೆ ಗಿಡ ನೀಡಿ ಗೌರವಿಸಲಾಯಿತು
ಕಾರ್ಯಕ್ರಮದಲ್ಲಿ ಸಂಜೀವಿನಿ ಒಕ್ಕೂಟ, ಧರ್ಮಸ್ಥಳ ಒಕ್ಕೂಟ, ಸಂಜೀವಿನಿ ಒಕ್ಕೂಟ, ನವೋದಯ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು. ಆಟೋಟ ಸ್ಫರ್ಧೆ ನಿರ್ಣಾಯಕರಾಗಿ ಕಲ್ಲುಗುಂಡಿ ಸವೇರಪುರ ಶಾಲಾ ದೈಹಿಕ ಶಿಕ್ಷಕಿ ಶೃತಿ ಹಾಗೂ ಕಲ್ಲುಗುಂಡಿ ಸರಕಾರಿ ಶಾಲಾ ದೈಹಿಕ ಶಿಕ್ಷಕಿ ಶ್ರೀಮತಿ ಸುಜಯ ಸಹಕರಿಸಿದ್ದರು.
ಸವೇರಪುರ ಶಾಲಾ ಮೈದಾನದಲ್ಲಿ ಆಟೋಟ ಸ್ಫರ್ಧೆ ನಡೆಯಿತು.

whatsapp image 2024 11 15 at 4.40.10 am

whatsapp image 2024 11 15 at 4.40.08 am

whatsapp image 2024 11 15 at 4.40.07 am

Sponsors

Related Articles

Back to top button