ಸರಪಾಡಿ ಹರಿಶ್ಚಂದ್ರ ಆಚಾರ್ ನಿಧನ…

ಬಂಟ್ವಾಳ: ಉಪ್ಪಿನಂಗಡಿ ಶ್ರೀ ವಿಶ್ವಕರ್ಮ ಸಂಘದ ಸ್ಥಾಪಕರಾದ ಸರಪಾಡಿ ಹರಿಶ್ಚಂದ್ರ ಆಚಾರ್(83 ) ಇಂದು(ಆ.1) ಸರಪಡಿಯ ಸ್ವಗೃಹದಲ್ಲಿ ನಿಧನರಾದರು.
ಸರಪಾಡಿ ಹಾಲು ಉತ್ಪಾದಕರ ಸಂಘದ ಮಾಜಿ ನಿರ್ದೇಶಕರಾದ ಅವರು ಉಪ್ಪಿನಂಗಡಿಯಲ್ಲಿ ಚಂದ್ರ ಜ್ಯೂವೆಲ್ಲರ್ಸ್ ಮಾಲಕರಾಗಿ ಸ್ವರ್ಣೋದ್ಯಮ ನಡೆಸುತ್ತಿದ್ದರು. ಉತ್ತಮ ಕೃಷಿಕರಾಗಿದ್ದ ಮೃತರು ಪತ್ನಿ, ಐವರು ಗಂಡು, ಒಬ್ಬಳು ಮಗಳನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
Sponsors