ಶನಿವಾರ – ದ.ಕ 139 ,ಉಡುಪಿ 136 ಹಾಗೂ ರಾಜ್ಯದಲ್ಲಿ 5172 ಕೊರೊನ ಪಾಸಿಟಿವ್ ಪತ್ತೆ…

ಮಂಗಳೂರು: ಇಂದು(ಶನಿವಾರ ) ದ.ಕ ಜಿಲ್ಲೆಯಲ್ಲಿ 139 ,ಉಡುಪಿ ಜಿಲ್ಲೆಯಲ್ಲಿ 136 ಹಾಗೂ ರಾಜ್ಯದಲ್ಲಿ 5172 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ದ.ಕ ಜಿಲ್ಲೆಯಲ್ಲಿ ಇಂದು 139 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.ಈ ಮೂಲಕ ಸೋಂಕಿತರ ಸಂಖ್ಯೆ 5847 ಕ್ಕೆ ಏರಿಕೆಯಾಗಿದೆ. 54 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇಂದು 8 ಮಂದಿ ಕೊರೊನದಿಂದಾಗಿ ಮೃತಪಟ್ಟಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಇಂದು 136 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4491 ಕ್ಕೆ ಏರಿಕೆಯಾಗಿದೆ.ಇಂದು ಲಭಿಸಿದ ವರದಿಗಳಲ್ಲಿ 716 ವರದಿ ನೆಗೆಟಿವ್‌ ಆಗಿದೆ.ಜಿಲ್ಲೆಯಲ್ಲಿ ಇಂದು 6 ಮಂದಿ ಕೊರೊನದಿಂದಾಗಿ ಮೃತಪಟ್ಟಿದ್ದಾರೆ.
ಇಂದು ರಾಜ್ಯದಲ್ಲಿ 5,172 ಹೊಸ ಪ್ರಕರಣಗಳು ವರದಿಯಾಗಿದ್ದು, ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,29,287ಕ್ಕೆ ಏರಿಕೆಯಾಗಿದೆ. ಇಂದು ರಾಜ್ಯದಲ್ಲಿ 98 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.ಇಂದು ರಾಜ್ಯದಲ್ಲಿ 3,860 ಮಂದಿ ಗುಣಮುಖರಾಗಿದ್ದಾರೆ.

IMG 20200801 WA0015 235x300

Related Articles

Leave a Reply

Your email address will not be published. Required fields are marked *