ಕಾಂಗ್ರೆಸ್ ಮುಖಂಡ ಐವನ್‌ ಡಿಸೋಜಾ ಹಾಗೂ ಪತ್ನಿಗೆ ಕೊರೊನಾ ದೃಢ…

ಮಂಗಳೂರು: ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್‌ ಡಿಸೋಜಾ ಹಾಗೂ ಅವರ ಪತ್ನಿ ಡಾ. ಕವಿತಾ ಅವರಿಗೆ ಕೊರೊನಾ ದೃಢಪಟ್ಟಿದೆ.
ಈ ಬಗ್ಗೆ ಸ್ವತಃ ಅವರೇ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ. ”ನನಗೆ ಮತ್ತು ನನ್ನ ಪತ್ನಿ ಡಾ.ಕವಿತಾಗೆ ಕೊರಾನಾ ಪಾಸಿಟಿವ್ ಆಗಿದೆ. ಯಾವುದೇ ಲಕ್ಷಣಗಳು ಇಲ್ಲದಿದ್ದರೂ ನಾವು ಕೊರೊನಾ ಪರೀಕ್ಷೆಗೆ ಪರೀಕ್ಷೆಗೆ ಒಳಪಟ್ಟೆವು. ಯಾವುದೇ ಗಾಬರಿಯಿಲ್ಲ. ಎಲ್ಲ ಸ್ನೇಹಿತರು ಮತ್ತು ಹಿತೈಷಿಗಳು ನಮ್ಮನ್ನು ಭೇಟಿ ಮಾಡದಂತೆ ನಾವು ವಿನಂತಿಸುತ್ತೇವೆ. ನಿಮ್ಮ ಪ್ರಾರ್ಥನೆ, ಆಶೀರ್ವಾದ ಮತ್ತು ಹಾರೈಕೆ ನಮ್ಮ ಶಕ್ತಿ” ಎಂದು ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

IMG 20200801 191537 300x210

Related Articles

Leave a Reply

Your email address will not be published. Required fields are marked *