ಸುಳ್ಯ- ಎಸ್ಸೆಸ್ಸೆಲ್ಸಿ ಸಾಧಕರಾದ ಅನುಷ್‌‌, ಆಶಿತಾಗೆ ಸಂಸದರಿಂದ ಅಭಿನಂದನೆ…

ಸುಳ್ಯ : ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಂಸದರ ಆದರ್ಶ ಗ್ರಾಮ ಬಳ್ಪಕ್ಕೆ ಭೇಟಿ ನೀಡಿ, ಎಸ್ಸೆಸ್ಸೆಲ್ಸಿ ಸಾಧಕರಾದ ಅನುಷ್‌‌, ಆಶಿತಾ ಅವರನ್ನು ಅಭಿನಂದಿಸಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಸಾಧನೆಗೈದ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಕಲಿಯುತ್ತಿರುವ ಬಳ್ಪ ಗ್ರಾಮದ ವಿದ್ಯಾರ್ಥಿ ಅನುಶ್ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 600 ಅಂಕ ಗಳಿಸಿದ ಬಾಳಿಲದ ವಿದ್ಯಾಭೋದಿನಿ ಹೈಸ್ಕೂಲ್ ನಲ್ಲಿ ಕಲಿಯುತ್ತಿರುವ ಬಳ್ಪ ಗ್ರಾಮದ ವಿದ್ಯಾರ್ಥಿನಿ ಆಶಿತಾ ವಿ ಇವರನ್ನು ಭೇಟಿಯಾಗಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸುಳ್ಯ ಶಾಸಕ ಎಸ್.ಅಂಗಾರ, ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.

FB IMG 1597643037348 300x136

Related Articles

Leave a Reply

Your email address will not be published. Required fields are marked *