ಮಹಿಳಾ ಸೇವಾ ಸಮಿತಿ ಅಧ್ಯಕ್ಷೆಯಾಗಿ ಶೈಲಜಾ ರಾಜೇಶ್ ಆಯ್ಕೆ…

ಬಂಟ್ವಾಳ: ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿಯ ನೂತನ ಅಧ್ಯಕ್ಷರಾಗಿ ,ನ್ಯಾಯವಾದಿ ಪ್ರತಿಷ್ಠಿತ ಕರ್ನಾಟಕ ಸರಕಾರದ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರಾಗಿರುವ ನ್ಯಾಯವಾದಿ ಶೈಲಜಾ ರಾಜೇಶ್ ಆಯ್ಕೆಯಾಗಿದ್ದಾರೆ.
ಇವರು ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಯ ಸಂಸ್ಥಾಪಕರಾಗಿದ್ದಾರೆ. ಬಂಟ್ವಾಳ ನೇತ್ರಾವತಿ ಸಂಗಮದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಶ್ರೀಮತಿ ರಾಗಿಣಿ, ಕಾರ್ಯದರ್ಶಿಯಾಗಿ ರಶ್ಮಿ ಸತೀಶ್, ಜತೆ ಕಾರ್ಯದರ್ಶಿಯಾಗಿ ಸರೋಜಿನಿ,
ಖಜಾಂಚಿಯಾಗಿ ಸುಜಾತಾ ದಿನೇಶ್ ಇವರನ್ನು ಆಯ್ಕೆ ಮಾಡಲಾಯಿತು.
ಬಿಸಿರೋಡಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ ಮಹಾಸಭೆಯಲ್ಲಿ ತಾಲೂಕು ಬಿಲ್ಲವ ಮಹಿಳಾ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ತಾಲೂಕು ಬಿಲ್ಲವ ಮಹಿಳಾ ಸಮಿತಿಯ ಅಧ್ಯಕ್ಷೆ ರೇವತಿ ಬಡಗ ಬೆಳ್ಳೂರು ಇವರ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.ಮಾಜಿ ಅಧ್ಯಕ್ಷೆ ನಯನ,ಮಾಲತಿ,ಭಾರತಿ ಕುಂದರ್,ಜಯಲಕ್ಷ್ಮಿ ಉಪಸ್ಥಿತರಿದ್ದರು. ಕಾ ರ್ಯದರ್ಶಿ ಲಲಿತಾ ವಂದಿಸಿದರು.ಭವಾನಿ ಸ್ವಾಗತಿಸಿದರು.

Related Articles

Back to top button