ಸಂಪಾಜೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ 78 ನೇ ಸ್ವಾತಂತ್ರೋತ್ಸವ…

ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ 78 ನೇ ಸ್ವಾತಂತ್ರೋತ್ಸವದ ಅಂಗವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ರವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾವೆಲ್ಲರೂ ಪ್ರೀತಿ ವಿಶ್ವಾಸದ ಮೂಲಕ ಸೌಹಾರ್ದತೆಯ ಬಲಿಷ್ಠ ಭಾರತವನ್ನು ಕಟ್ಟೋಣ ಎಂದರು.
ಗ್ರಾಮ ಪಂಚಾಯತ್ ಆಡಳಿತಕ್ಕೆ ಸರ್ವರ ಸಹಕಾರ ಕೋರಿದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಪಾಜೆ ಕ್ರಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಇಂಗಾಜೆ ತ್ಯಾಗ ಬಲಿದಾನದ ಮೂಲಕ ಹಿರಿಯರು ದೊರಕಿಸಿಕೊಟ್ಟ ಸ್ವಾತಂತ್ರದ ಬಗ್ಗೆ ನೆನಪಿಸಿದರು. ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ.ಎಂ.ಶಾಹಿದ್ ತೆಕ್ಕಿಲ್ ನಾವೆಲ್ಲರೂ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದ್ದೇವೆ. ಇತರ ಬಲಿಷ್ಠ ರಾಷ್ಟ್ರಕ್ಕೆ ಪೈಪೋಟಿ ಕೊಡುವಷ್ಟು ನಾವು ಬೆಳೆದಿದ್ದೇವೆ.ನಾವೆಲ್ಲರೂ ಸಹೋದರತೆ,ಪ್ರೀತಿ ವಿಶ್ವಾಸದೊಂದಿಗೆ ಮುನ್ನಡೆಯೋಣ ಎಂದು ಶುಭ ಹಾರೈಸಿದರು. ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯರಾದ ಕೆ.ಪಿ.ಜಾನಿ ಸ್ವಾತಂತ್ರದ ಮಹತ್ವದ ಬಗ್ಗೆ ವಿವರಿಸಿದರು.
ಮಾಜಿ ಅಧ್ಯಕ್ಷರಾದ ಜಿ.ಕೆ.ಹಮೀದ್ ಗೂನಡ್ಕ ಸ್ವಾತಂತ್ರೋತ್ಸವದ ದಿನ ಗ್ರಾಮ ಪಂಚಾಯತ್ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಶ್ರೀಮತಿ ಸುಮತಿ ಶಕ್ತಿವೇಲು ಹಾಗೂ ಉಪಾಧ್ಯಕ್ಷರಾಗಿ ಎಸ್.ಕೆ.ಹನೀಫ್ ಅಧಿಕಾರ ವಹಿಸಿದ್ದು, ಈ ದಿನ ವರ್ಷದ ಸಂಭ್ರಮ ಶುಭಾಶಯಗಳು ಸಲ್ಲಿಸಿ, ಈ ದಿನದ ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಸಂಪಾಜೆ ಅಧ್ಯಕ್ಷರಾದ ಶ್ರೀಮತಿ ಪಾರ್ವತಿ,ಮಾಜಿ ಅಧ್ಯಕ್ಷರಾದ ಯೋಗಿಶ್ವರ್ ಪಂಚಾಯತ್ ಸದಸ್ಯರುಗಳಾದ ಜಗದೀಶ್ ರೈ ,ಸುಂದರಿ ಮುಂಡಡ್ಕ ಅಬೂಸಾಲಿ ಪಿ.ಕೆ ಸವಾದ್ ಗೂನಡ್ಕ,ವಿಜಯಕುಮಾರ್ ಆಲಡ್ಕ,ಲಿಸ್ಸಿ ಮೊನಾಲಿಸಾ,,ವಿಮಲಾ ಪ್ರಸಾದ್,ಅನುಪಮಾ,ಸುಶೀಲ, ಮಾಜಿ ಪಂಚಾಯತ್ ಅಧ್ಯಕ್ಷರಾದ ಯಮುನಾ.ಬಿ.ಎಸ್, ಕೃಷಿ ಪತ್ತಿನ ಸಹಕಾರಿ ಸಂಘದ ವ್ಯವಸ್ಥಾಪಕರಾದ ವೀರೇಂದ್ರ ಕುಮಾರ್ ಜೈನ್, ಸೊಸೈಟಿ ನಿರ್ದೇಶಕಿ ರಾಜೀವಿ ಬೈಲೆ, ಎಚ್.ಹಮೀದ್, ಸವೇರಪುರ ಶಾಲಾ sdmc ಅಧ್ಯಕ್ಷರಾದ ಲೂಕಾಸ್ ಟಿ ಐ, ವರ್ತಕ ಸಂಘದ ಕಾರ್ಯದರ್ಶಿ ರಝಕ್ ಕೆ.ಎ, ಪದ್ಮಯ್ಯ ಗೌಡ, ಕೆ.ಎಂ.ಅಶ್ರಫ್, ಮಾಜಿ ಪಂಚಾಯತ್ ಸದಸ್ಯರಾದ ನಾಗೇಶ್ ಪಿ.ಆರ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶಿಲ್ಪಾ, ಎಂ.ಬಿ.ಕೆ ಕಾಂತಿ,ಕ್ರಷಿ ಶಕೀ ಮೋಹಿನಿ ಪಶು ಶಕೀ ಮಾಲತಿ, ಸೌಮ್ಯ,ಸ್ವಚ್ಛತಾ ಸಮಿತಿಯ ಕಾರ್ಯದರ್ಶಿ ಮಂಜುನಾಥ್, ಅಬೂಬಕ್ಕರ್ ಎಂ.ಸಿ ಉಮೇಶ್ ಕನಪಿಲ,ಗುರುವಪ್ಪ,ಪಂಚಾಯತ್ ಸಿಬ್ಬಂದಿಗಳಾದ ಗೋಪಮ್ಮ,ಭರತ್,ಮಧುರ,ಸವಿತಾ,ಭೋಜಪ್ಪ,ನಸೀಮಾ, ಗುರುಪ್ರಸಾದ್ ಬೈಲೆ, ಕೃಷ್ಣಪ್ರಸಾದ್ ಬೈಲೆ, ರತ್ನಾಕರ್ ಕೈಪಡ್ಕ, ಬಿ.ಎಸ್ ಹನೀಫ್,ಹಾರೀಸ್ ನೆಲ್ಲಿಕುಮೆರಿ ಭಾರತಿ ಬಾಚಿಗದ್ದೆ,ಸಂಜೀವ ಪೂಜಾರಿ .ಕೆ.ಪಿ.ಮಹಮ್ಮದ್, ಹಸೈನಾರ್ ಉಪಸ್ಥಿತರಿದ್ದರು.ಉಪಾಧ್ಯಕ್ಷರಾದ ಎಸ್.ಕೆ.ಹನೀಫ್ ಸ್ವಾಗತಿಸಿ ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ ವಂದಿಸಿದರು ಕಲ್ಲುಗುಂಡಿ ಸರಕಾರಿ ಶಾಲಾ ಮಕ್ಕಳಿಂದ ಪ್ರಾರ್ಥನೆ ನಡೆಯಿತು.

whatsapp image 2024 08 15 at 11.11.39 am

Sponsors

Related Articles

Back to top button