ಸಮಾಲೋಚನಾ ಸಭೆ…

ಬಂಟ್ವಾಳ : ಶ್ರೀ ವಿಷ್ಣುಮೂರ್ತಿ ಮಂಜಲ್ ಪಾದೆ ಸಜೀಪ ಮುನ್ನೂರು ಗ್ರಾಮ ಇದರ ಅಷ್ಟಬಂಧ ಬ್ರಹ್ಮಕಲಶೋತ್ಸವ ನಿಮಿತ್ತ ಪೂರ್ವಭಾವಿ ಸಮಾಲೋಚನಾ ಸಭೆಯು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣ ಶಾಮ್ ಎಂ ಅಧ್ಯಕ್ಷತೆಯಲ್ಲಿ ಜರಗಿತು.
ಜೂನ್ 2 ರಿಂದ ಮೂರು ದಿನಗಳ ಪರ್ಯಂತ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ಉಚ್ಚಿಲ ತಾಯ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ, ಧಾರ್ಮಿಕ-ಸಾಂಸ್ಕೃತಿಕ ವೈದಿಕ ಹಾಗೂ ವಿವಿಧ ಭಜನಾ ಮಂಡಳಿಗಳ ಸಹಯೋಗದೊಂದಿಗೆ ನಾಮಸಂಕೀರ್ತನೆ ಯೊಂದಿಗೆ ಶ್ರದ್ಧಾಭಕ್ತಿಯಿಂದ ವಿದ್ಯುಕ್ತವಾಗಿ ಜರಗಿಸಲು ತೀರ್ಮಾನಿಸಲಾಯಿತು.
ಮುಗುಳಿಯ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಯಶಂಕರ ಬಾಸ್ರಿ ತಾಯ, ಸಜಿಪ ಮಾಗಣೆ ತಂತ್ರಿ ಎo ಸುಬ್ರಹ್ಮಣ್ಯ ಭಟ್, ಎಂ ಸೂರ್ಯನಾರಾಯಣ ಭಟ್, ಧ. ಗ್ರಾ. ಯೋ. ಸೇವಾನಿರತೆ ಬೇಬಿ, ಪಂಚಾಯತ್ ಸದಸ್ಯೆ ಸರಸ್ವತಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಕೇಶವಭಟ್, ಗಿತೇಶ್ ಗಟ್ಟಿ, ಕುಸುಮಾವತಿ, ನಾರಾಯಣ ಐತಾಳ, ಪ್ರಮೀಳಾ ಗಟ್ಟಿ, ಗಣೇಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.

775a3df3 2d7a 42ca Ac5e B44156a8925a Scaled E1611044996731 300x246

Related Articles

Leave a Reply

Your email address will not be published. Required fields are marked *