ಸುಳ್ಯ ಯುನೈಟೆಡ್ ಫುಟ್ಬಾಲ್ ಕ್ಲಬ್ ವತಿಯಿಂದ ಫುಟ್ಬಾಲ್ ಪಂದ್ಯಾಟ…

ಸುಳ್ಯ: ಸುಳ್ಯ ಯುನೈಟೆಡ್ ಫುಟ್ಬಾಲ್ ಕ್ಲಬ್ ಆಯೋಜಿಸಿದ ಫುಟ್ಬಾಲ್ ಪಂದ್ಯಾಟವು ಗಾಂಧಿನಗರ ಶಾಲಾ ಮೈದಾನದಲ್ಲಿ ಅ. 4 ರಂದು ನಡೆಯಿತು.
ಈ ಪಂದ್ಯಾಟದಲ್ಲಿ ಸ್ಥಳೀಯ ಸುಮಾರು 16 ತಂಡಗಳು ಭಾಗವಹಿಸಿದ್ದವು. ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು JB ಯುನೈಟೆಡ್ ಪಡೆದುಕೊಂಡರೆ,ದ್ವಿತೀಯ ಬಹುಮಾನವನ್ನು ಸುಳ್ಯ ಯುನೈಟೆಡ್ ತಂಡ ಪಡೆದುಕೊಂಡಿತು.
ಬಹುಮಾನ ವಿತರಣೆಯನ್ನು ಹಿರಿಯ ಆಟಗಾರರಾದ ರಫೀಕ್ ಮಲ್ಲು, ಇಕ್ಬಾಲ್ jb, ಬಷೀರ್ ನ್ಯಾಶನಲ್, ಹಮೀದ್ ಕುತ್ತಮೊಟ್ಟೆ ,ಮುನಾಫರ್, ಬಾತಿಶ್ ಅರ್ವ, ಖಾಲಿದ್ ಕೊಚ್ಚಿ, ಹಮೀದ್ jb, ಹಾಗು ಪಂದ್ಯಾಟದ ಉಸ್ತುವಾರಿ ಮಶೂದ್ ಅಶ್ರಫ್ (ಆಚ್ಚಪ್ಪು) ಇವರ ಸಮ್ಮುಖದಲ್ಲಿ ನೀಡಿ ಜಯಶಾಲಿ ತಂಡಗಳಿಗೆ ಪ್ರೋತ್ಸಾಹಿಸಲಾಯಿತು.