ಅಂತಾರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ವಿಶ್ವ ದಾಖಲೆ ಸಾಧನೆ ಮಾಡಿದ ಸುಳ್ಯದ ಮಹಮ್ಮದ್ ರುವೈದ್ ಗೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಂದ ಸನ್ಮಾನ…

ಸುಳ್ಯ: 16 ವರ್ಷದ ವಯೋಮಾನದ ವಿಭಾಗದಲ್ಲಿ ಕ್ಯಾಲ್ಕುಲೇಟರ್ ನಲ್ಲಿ 1 ರಿಂದ 10 ರ ವರೆಗೆ 10 ಬಾರಿ 42 ಸೆಕೆಂಡ್ಸ್ ಗಳಲ್ಲಿ ಅತೀ ವೇಗವಾಗಿ ಬಳಸಿ ಬುಕ್ಸ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲೆ ಯ ಸಾಧನೆ ಮಾಡಿದ ಕೇರಳದ ಅಂತಾರಾಷ್ಟ್ರೀಯ ಶೈಕ್ಷಣಿಕ ಕೇಂದ್ರ ಪುನೂರ್ ಗಾರ್ಡನ್ ನ ವಿದ್ಯಾರ್ಥಿ, ಸುಳ್ಯ ಜಟ್ಟಿಪ್ಪಳ್ಳ ನಿವಾಸಿ ಉದ್ಯಮಿ ಅಬ್ದುಲ್ ಲತೀಫ್ ಹರ್ಲಡ್ಕ ರವರ ಪುತ್ರ ಮಹಮ್ಮದ್ ರುವೈದ್ ರವರನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫ, ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಸದಸ್ಯ ಕೆ. ಎಸ್. ಉಮ್ಮರ್, ಅನ್ಸಾರುಲ್ ಮುಸ್ಲಿಮೀ ನ್ ಅಸೋಸಿಯೇಷನ್ ಉಪಾಧ್ಯಕ್ಷ ಕೆ. ಬಿ. ಇಬ್ರಾಹಿಂ, ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಎಂ. ಬಿ. ಸದಾಶಿವ, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿ ಪ್ಪಳ್ಳ, ಯುನೈಟೆಡ್ ಅರಬ್ ಎಮಿರೆಟ್ಸ್ ಹರ್ಲ ಗ್ರೂಪ್ ಆಫ್ ಕಂಪೆನೀಸ್ ನ ಬಶೀರ್ ಆರಂಬೂರು ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button