ಪೊಳಲಿಯಲ್ಲಿ ಪೋಲೀಸ್ ಹೊರಠಾಣೆಯ ಉದ್ಘಾಟನೆ…
ಬಂಟ್ವಾಳ: ಪೊಳಲಿಯಲ್ಲಿ ಇಂದು(ನ.16) ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಯವರು ಪೋಲೀಸ್ ಹೊರಠಾಣೆಯನ್ನು ಉದ್ಘಾಟಿಸಿದರು.
ಪೊಳಲಿ ಶ್ರೀ ರಾಜರಾಜೇಶ್ವರಿ ಸನ್ನಿಧಿಗೆ ಸನಿಹ ಬಸ್ ನಿಲ್ದಾಣದ ಬಳಿಯಲ್ಲಿ ಗ್ರಾಮಾಂತರ ಪೋಲೀಸ್ ಠಾಣೆಯ ಪೋಲಿಸ್ ಔಟ್ ಪೋಸ್ಟ್ ನ ಉದ್ಘಾಟನೆ ಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕೀ ಹಸ್ತಾಂತರಿಸುವ ಮೂಲಕ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗುವ ನಿಟ್ಟಿನಲ್ಲಿ ಪೋಲೀಸ್ ಔಟ್ ಪೋಸ್ಟ್ ನಿರ್ಮಾಣ ವಾಗಿರುವುದು ತಂಬಾ ಸಂತಸದ ವಿಚಾರ.ಇದರ ಜೊತೆಗೆ ಪೋಲೀಸರಿಗೂ ಭದ್ರತೆಯನ್ನು ಒದಗಿಸಿದೆ ಎಂದು ಅವರು ಹೇಳಿದರು.
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯಕ್ಕೆ ಬರುವ ಭಕ್ತರಿಗೆ ಹೆಚ್ಚು ಭದ್ರತೆಯನ್ನು ಒದಗಿಸಲು ಸಹಾಯವಾಗುವ ನಿಟ್ಟಿನಲ್ಲಿ ಮತ್ತು ಆ ಭಾಗದಲ್ಲಿ ನಡೆಯುವ ಅಪರಾಧಗಳ ಬಗ್ಗೆ ಶೀಘ್ರವಾಗಿ ಮಾಹಿತಿ ಪಡೆಯಲು ಇದು ಸಹಾಯವಾಗುತ್ತದೆ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪೊಳಲಿಗೆ ಹೋಗಿ ಬರಲು ತುಂಬಾ ಸಮಯ ತಗಲುತ್ತದೆ ಮತ್ತು ಪೋಲೀಸರು ಮಳೆಗಾಲದಲ್ಲಿ ಬಸ್ ನಿಲ್ದಾಣದಲ್ಲಿ ನಿಂತುಕೊಳ್ಳಲು ತೊಂದರೆಯಾಗುತ್ತಿತ್ತು. ಈ ಎಲ್ಲಾ ಕಾರಣಗಳಿಗಾಗಿ ಸಾರ್ವಜನಿಕರ ಸಹಾಯದಿಂದ ಮತ್ತು ಗ್ರಾಮಾಂತರ ಠಾಣಾ ಎಸ್.ಐ.ಪ್ರಸನ್ನ ಅವರ ಮುತುವರ್ಜಿಯಿಂದ ಪೋಲೀಸ್ ಹೊರ ಠಾಣೆ ನಿರ್ಮಾಣ ಮಾಡಲಾಗಿದೆ.
ಈ ಸಂದರ್ಭದಲ್ಲಿ ತಾ.ಪಂ. ಸದಸ್ಯ ಯಶವಂತ ಪೊಳಲಿ, ಡಿ.ವೈ.ಎಸ್.ಪಿ. ವೆಲೆಂಟೈನ್ ಡಿ.ಸೋಜ, ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಬಂಟ್ವಾಳ ಎಸ್.ಐ.ಗಳಾದ .ಪ್ರಸನ್ನ , ಅವಿನಾಶ್, ಸಂಜೀವ ,ರಾಜೇಶ್ ಕೆ.ವಿ.ಕಲೈಮಾರ್ ಉಪಸ್ಥಿತರಿದ್ದರು.