ಗೂನಡ್ಕ -ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಭೆ…

ಸುಳ್ಯ: ಅರಂತೋಡು ತಾಲೂಕು ಪಂಚಾಯತ್ ಕ್ಷೇತ್ರದ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ಇತ್ತೀಚೆಗೆ ಹೆಲಿಕಾಪ್ಟರ್ ಅವಘಡಕ್ಕೀಡಾಗಿ ವೀರ ಮರಣವನ್ನಪ್ಪಿದ ಸಿ ಡಿ ಯಸ್ ಬಿಪಿನ್ ರಾವತ್ ರವರಿಗೆ ಶ್ರದ್ಧಾಂಜಲಿ ಸಭೆಯು ಡಿ. 10 ರಂದು ಸಜ್ಜನ ಸಭಾ ಭವನದಲ್ಲಿ ನಡೆಯಿತು.
ಸಭೆಯಲ್ಲಿ ಹುತಾತ್ಮರಿಗೆ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸುಳ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ .ಕೆ. ಹಮೀದ್ ರವರು ಮಾತನಾಡಿ, ವೀರ ಮರಣ ಹೊಂದಿದ ಬಿಪಿನ್ ರಾವತ್ ರವರು ದೇಶಕ್ಕೆ ಕೊಟ್ಟ ಸೇವೆಯನ್ನು ಕೊಂಡಾಡಿದರು. ಸೈನಿಕರಾದ ಅಬ್ದುಲ್ಲ ಬೀಜದಕಟ್ಟೆ, ಮುಝಫರ್ ದರ್ಕಾಸ್ ರವರು ಮಾತನಾಡಿ, ಜನರಲ್ ಬಿಪಿನ್ ರಾವತ್ ರವರಿಗೆ ಭದ್ರತಾ ಇಲಾಖೆಯ ಮೇಲೆ ಇದ್ದ ಚಾಕಚಕ್ಯತೆ ಹಾಗು ಸೈನ್ಯವನ್ನು ಮುನ್ನೆಡೆಸುತ್ತಿದ್ದ ರೀತಿಯ ಬಗ್ಗೆ ವಿವರಿಸಿದರು.
ಅರಂತೋಡು ತಾಲೂಕು ಪಂಚಾಯತ್ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷರಾದ ರಹೀಮ್ ಬೀಜದಕಟ್ಟೆ ಮಾತನಾಡಿ ಸೈನಿಕ ಕುಟುಂಬದಲ್ಲಿ ಜನಿಸಿ ದೇಶದ ಸೈನ್ಯಕ್ಕೆ ಮುಂದಾಳತ್ವ ನೀಡಿ ಸೇವೆಯಲ್ಲೇ ವೀರ ಮರಣವನ್ನಪ್ಪಿದ ಜನರಲ್ ಬಿಪಿನ್ ರಾವತ್ ರವರ ದೇಶ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಸವಾದ್ ಗೂನಡ್ಕ ,ಎಸ್ ಕೆ ಹನೀಫ್ , ದಕ್ಷಿಣ ಕನ್ನಡ ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಉಪಾಧ್ಯಕ್ಷರಾದ ಇದ್ದು ಕುಂಞಿ ಅರಂತೋಡು , ತಾಲೂಕು ಏನ್ ಎಸ್ ಯು ಐ ಕಾರ್ಯದರ್ಶಿ ಉಬೈಸ್ ಪಿ , ತಾಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ಮುನ್ನ ಗೂನಡ್ಕ , ತಾಲೂಕು ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ತಾಜುದ್ದೀನ್ ಅರಂತೋಡು , ಬೂತ್ ಅಧ್ಯಕ್ಷರಾದ ಅಬ್ದುಲ್ಲಾ ಚೇರೂರ್ , ಹಿರಿಯರಾದ ಉಮ್ಮರ್ ಹಾಜಿ ಗೂನಡ್ಕ, ಅಶ್ರಫ್ ಪೆಲ್ತಡ್ಕ , ಮೊಹಮ್ಮದ್ ಪೆಲ್ತಡ್ಕ , ಕುಂಞಿಕಣ್ಣ ಗೂನಡ್ಕ , ಅವಿನ್ ಕನ್ಸ್ಟ್ರಕ್ಷನ್ ಮಾಲಕ ವಿನಯ್ , ಉನೈಸ್ ಗೂನಡ್ಕ , ಅರಿಸ್ ಝಮ್ ಝಮ್ , ಉಸ್ಮಾನ್ ಪಾಂಡಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಉಪಸ್ಥಿತರಿದ್ದರು. ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಅಬುಶಾಲಿ ಸ್ವಾಗತಿಸಿ, ಎಸ್ ಕೆ ಹನೀಫ್ ವಂದನಾರ್ಪಣೆಗೈದರು.

Related Articles

Back to top button