ಅರಿವು ನೆರವು ಕಾರ್ಯಕ್ರಮ ಮತ್ತು ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮ….
ಬಂಟ್ವಾಳ: ಫಲ್ಗುಣಿ ಸ್ತ್ರೀ ಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ನಿ.ಬಂಟ್ವಾಳ ಇದರ 2018-19 ಸಾಲಿನ ವಾರ್ಷಿಕ ಮಹಾಸಭೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಮಾಜ ಕಾರ್ಯ ಸಂಸ್ಥೆ ಜನಶಿಕ್ಷಣ ಟ್ರಸ್ಟ್ , ಸಾಂತ್ವನ ಕೇಂದ್ರ ಬಂಟ್ವಾಳ ಇದರ ವತಿಯಿಂದ ಅರಿವು ನೆರವು ಕಾರ್ಯಕ್ರಮ ಮತ್ತು ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಬಿಸಿರೋಡ್ ನ ಸ್ತ್ರೀ ಶಕ್ತಿ ಸಭಾ ಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷೆ ಗೀತಾಜಯತೀರ್ಥ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು.ಬಳಿಕ ಮಾತನಾಡಿದ ಅವರು ಮಹಿಳೆಯರ ಆರ್ಥಿಕ ಪರಿಸ್ಥಿತಿ ಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಸಂಘದ ರಚನೆಯಾಗಿದೆ. ಹಾಗಾಗಿ ಸ್ತ್ರೀ ಶಕ್ತಿ ಗುಂಪಿನ ಪ್ರತಿಯೊಬ್ಬರೂ ಈ ಸಂಘದ ಮೂಲಕ ವ್ಯವಹಾರ ನಡೆಸುವಂತೆ ವಿನಂತಿಯನ್ನು ಮಾಡಿದರು.
ವಿಟ್ಲ ಸಿ.ಡಿ.ಪಿ.ಒ. ಫಲ್ಗುಣಿ ಸ್ತ್ರೀ ಶಕ್ತಿ ವಿವಿಧೋದ್ದೇಶ ಸಂಘದ ಅಭಿವೃದ್ಧಿ ಜೊತೆ ಸಂಘದ ಸದಸ್ಯರು ಆರ್ಥಿಕವಾಗಿ ಸದೃಡವಾಗಲು ಸದಸ್ಯರ ಸಕ್ರೀಯ ಪಾಲ್ಗೋಳುವಿಕೆ, ಮಾಹಿತಿ ತಂತ್ರಜ್ಞಾನದ ಬಳಕೆ ಬಹಳ ಪ್ರಮುಖವಾಗಿದೆ ಎಂದು ಹೇಳಿದರು.ಸರಕಾರದಿಂದ ಬರುವ ಸವಲತ್ತುಗಳನ್ನು ಈ ಸಂಘದ ಮೂಲಕ ಸಂಘಟನೆಗಳು ಪಡೆಯುವಂತೆಅವರು ತಿಳಿಸಿದರು.
ವೇದಿಕೆಯಲ್ಲಿ ಬಂಟ್ವಾಳ ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ,ವಿಟ್ಲ ವಲಯದ ಹಿರಿಯ ಮೇಲ್ವಿಚಾರಕಿ ಪುಷ್ಪಲತಾ, ಉಪಾಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ, ನಿರ್ದೇಶಕರುಗಳಾದ ಸುನೀತಾ, ಸಾರಿಕಾ, ಶೈನಿ, ರಂಜಿನಿ, ವಾರಿಜಾ, ಲೀಲಾ, ಸುಶೀಲಾ, ಶಾಂತಿ, ಸುಧಾ ಉಪಸ್ಥಿತರಿದ್ದರು.ಕಾರ್ಯನಿರ್ವಣಾಧಿಕಾರಿ ಪ್ರಮಿಳಾ ವರದಿ ಮಂಡಿಸಿದರು. ಸುಧಾ ಸ್ವಾಗತಿಸಿ, ಸುನೀತಾ ವಂದಿಸಿದರು.