ನಲ್ಕೆಮಾರು ಶಾಲೆಯಲ್ಲಿ ಗಿಡ ನಾಟಿ ಕಾರ್ಯಕ್ರಮ…

ಬಂಟ್ವಾಳ,ಜು.18 : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ರಿಜಿಸ್ಟರ್ಡ್ ಬಂಟ್ವಾಳ, ದ.ಕ.ಜಿಲ್ಲೆ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನಲ್ಕೆಮಾರ್, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ನಲ್ಕೇಮಾರ್ ಇದರ ಸಂಯುಕ್ತ ಆಶ್ರಯದಲ್ಲಿ ಪರಿಸರ ಮಾಹಿತಿ, ಗಿಡನಾಟಿ ಕಾರ್ಯಕ್ರಮವನ್ನು ಗ್ರಾ.ಪಂ.ಅಧ್ಯಕ್ಷ ವಿಜಯಕುಮಾರ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕಿನ ಕೃಷಿ ಅಧಿಕಾರಿ ಭಾಸ್ಕರ್ ಎಂ. ಪರಿಸರದ ಬಗ್ಗೆ ಮಾಹಿತಿ ನೀಡಿದರು. ಮುಂದಿನ ಪೀಳಿಗೆಗೆ ಗಿಡಮರಗಳ ಮಹತ್ವ ವಿವರಿಸಿದರು. ಒಕ್ಕೂಟದ ಅಧ್ಯಕ್ಷ ಥಾಮಸ್ ಸಲ್ದಾನ, ಬಿಸಿ ರೋಡು ವಲಯದ ಮೇಲ್ವಿಚಾರಕಿ ವೇದಾವತಿ, ಹಾಗೂ ಸೇವಾ ಪ್ರತಿನಿಧಿ ವಿಜಯಲಕ್ಷ್ಮಿ, ವಿದ್ಯಾಭಿವೃದ್ಧಿ ಸಂಘದ ಯೋಗೀಶ್, ಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿ ಕುಮಾರಿ , ಶಿಕ್ಷಕ ವೃಂದ, ಒಕ್ಕೂಟದ ಸದಸ್ಯರಿದ್ದರು. ನಿರೂಪಣೆಯನ್ನು ರೇಖಾ ರಾವ್ ನೆರವೇರಿಸಿದರು. ಶಶಿಕಲಾ ಸ್ವಾಗತಿಸಿದರು. ಶಾಲಾ ಆವರಣದಲ್ಲಿ ಗಿಡ ನಾಟಿ ಮಾಡಲಾಯಿತು.