ಉತ್ತಮ ಅಂಕ ಗಳಿಸಿದ ಪದವಿ ವಿದ್ಯಾರ್ಥಿಗಳಿಗೆ ಸನ್ಮಾನ…

ಸುಳ್ಯ: ಸಂಪಾಜೆ ಪೇರಡ್ಕ ಗೂನಡ್ಕ ಎಂ.ಜೆ.ಎಂ ಹಾಗೂ ಗೂನಡ್ಕ ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ಮಜಲಿಸ್ನೂರ್ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಇದರ ಅಂತಿಮ ವರ್ಷದ ನೆಹರೂ ಸ್ಮಾರಕ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಅಹಮದ್ ಅಸ್ಫಾಕ್ ಗೂನಡ್ಕ, ಬಿ.ಎಸ್.ಡಬ್ಲ್ಯೂ ವಿದ್ಯಾರ್ಥಿ ಸಫಿಕ್ ಕೆ.ಎಲ್ ಹಾಗೂ ಅಂತಿಮ ವರ್ಷದ ಬಿ.ಎಸ್.ಡಬ್ಲ್ಯೂ ವಿದ್ಯಾರ್ಥಿ ಇರ್ಫಾನ್ ಸೆಟ್ಯಡ್ಕ ರವರುಗಳಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹಾಗೂ ಪ್ರಥಮ ದರ್ಜೆಯಲ್ಲಿ ತೇರ್ಗಡೆಯದ ಪಾಝಿಮ್ ಕಡೆಪಾಲ ರವರಿಗೆ ಕಮಿಟಿ ವತಿಯಿಂದ ಶಾಲು ಹೊದಿಸಿ ಪೇರಡ್ಕ ಜುಮಾ ಮಸೀದಿಯಲ್ಲಿ ಪೇರಡ್ಕ ಖತೀಬ್ ನಹೀಮ್ ಫೈಝಿ ಹಾಗೂ ಆರಂತೋಡು ಜುಮಾ ಮಸೀದಿ ಖತೀಬ್ ಬಹು.ಇಸ್ಮಾಯಿಲ್ ಫೈಝಿ ಉಸ್ತಾದ್ ಸಹ ಉಸ್ತಾದ್ ರವರುಗಳಾದ ಹಾರೀಸ್ ಅಝಹರಿ,ಆರಂತೋಡು ಮಸೀದಿ ಸಹ ಉಸ್ತಾದ್ ನೌಶಾದ್ ಅಝಹರಿ ಹಾಗೂ ಪೇರಡ್ಕ ಜಮಾಯತ್ ಕಮಿಟಿ ಅಧ್ಯಕ್ಷರಾದ ಟಿ.ಎಂ.ಶಾಹಿದ್ ತೆಕ್ಕಿಲ್ ರವರು ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಹಮೀದ್ ಹಾಜಿ ಸುಳ್ಯ ಸುಪ್ರೀಂ ಅಹಮದ್ ಹಾಜಿ,ಪಾರೆ ಅಹಮದ್,ಆರಂತೋಡು ಜಮಾಯತ್ ಅಧ್ಯಕ್ಷರಾದ ಅಶ್ರಫ್ ಗುಂಡಿ,ಎಂ ಆರ್ ಡಿ ಎ ಅಧ್ಯಕ್ಷರಾದ ಜಿ.ಕೆ.ಹಮೀದ್ ಗೂನಡ್ಕ,ಎಸ್ ಕೆ ಎಸ್ ಎಸ್ ಎಫ್ ನ ಹನೀಫ್ ಮೊಟ್ಟಂಗಾರ್, ಸಾಜೀದ್ ಅಝಹರಿ,ಮಾಜಿ ಅಧ್ಯಕ್ಷರಾದ ಟಿ.ಎಂ ಬಾಬಾ ಹಾಜಿ ತೆಕ್ಕಿಲ್ ,ಉಸ್ಮಾನ್ ಪೇರಡ್ಕ ಪಿ.ಕೆ.ಉಮ್ಮರ್, ಪಾಂಡಿ ಅಬ್ಬಾಸ್, ಟಿ ಬಿ ಹನೀಫ್,ತೆಕ್ಕಿಲ್ ಮೊಹಮದ್ ಕುಂಞಿ ಪೇರಡ್ಕ, ಮೊಯಿದು ದರ್ಕಾಸ್, ತೆಕ್ಕಿಲ್ ಸಾಧುಮನ್ ಪೇರಡ್ಕ, ವಿವಿಧ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು ಅಬ್ದುಲ್ ಖಾದರ್ ಮೊಟ್ಟಂಗಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಈ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವುದರು ಮುಖಾಂತರ ಇತರ ವಿದ್ಯಾರ್ಥಿಗಳಿಗೆ ಪ್ರಚೋದನೆ ಸಿಗಲಿ ಎಂದು ಎಲ್ಲರು ಹಾರೈಸಿದರು.

whatsapp image 2024 08 19 at 2.34.49 pm

Related Articles

Back to top button