ಶ್ರೀ ಕೃಷ್ಣ ಜನ್ಮಾಷ್ಟಮಿ…

ಬಂಟ್ವಾಳ: ಜ್ಞಾನ ವಿಕಾಸ ಕೇಂದ್ರ ಸಜೀಪಮುನ್ನೂರು ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀಕೃಷ್ಣ ಜಗತ್ತಿಗೆ ಆದರ್ಶ ಎಂಬ ವಿಷಯದಲ್ಲಿ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಮಾತನಾಡಿದರು.
ಜ್ಞಾನವಿಕಾಸ ಕೇಂದ್ರದ ಸದಸ್ಯರುಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮನ್ವಯಾಧಿಕಾರಿ ಸ್ವಪ್ನ , ಮೇಲ್ವಿಚಾರಕಿ ಅಮಿತಾ, ಸೇವಾ ಪ್ರತಿನಿಧಿ ಬೇಬಿ ಮೊದಲಾದವರು ಉಪಸ್ಥಿತರಿದ್ದರು.