ಕ್ಯಾಪ್ಟನ್ ಬ್ರಿಜೇಶ್ ಚೌಟ – ಬಂಟ್ವಾಳ ಭೇಟಿ…

ಬಂಟ್ವಾಳ:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ಮಾ. 20 ರಂದು ಬಂಟ್ವಾಳ ಕ್ಷೇತ್ರ ಬಿಜೆಪಿ ಕಚೇರಿಗೆ ಭೇಟಿ ನೀಡಿದರು.
ನಂತರ ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ಶ್ರೀ ದೇವಪ್ಪ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಕ್ಯಾಪ್ಟನ್ ರವರು ಮಾತಾಡುತ್ತಾ ” ಪ್ರತಿಷ್ಠಿತ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾನು ಆಯ್ಕೆಯಾಗಿರುವುದು ನನ್ನ ಸೌಭಾಗ್ಯ ಮತ್ತು ಸಹಜವಾಗಿ ನನಗೆ ಸಂತಸ ತಂದಿದೆ. ನನಗೆ ಈ ಅವಕಾಶವನ್ನು ಒದಗಿಸಿಕೊಟ್ಟ ರಾಷ್ಟ್ರ ನಾಯಕರಿಗೆ, ರಾಜ್ಯ ವರಿಷ್ಠರಿಗೆ, ಜಿಲ್ಲೆಯ ಅಧ್ಯಕ್ಷರಿಗೆ, ಪಕ್ಷದ ಹಿರಿಯರಿಗೆ, ಪ್ರಮುಖರಿಗೆ ನಾನು ಅಭಿವಂದನೆಗಳನ್ನು ಸಲ್ಲಿಸುತ್ತೇನೆ. ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿಯ ಬೇರೆ ಬೇರೆ ಸಂಘಟನಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಿರುವ ನಾನು ಪಕ್ಷದ ಹಿರಿಯರ ಮತ್ತು ಯುವ ಕಾರ್ಯಕರ್ತರ ತ್ಯಾಗ ಪರಿಶ್ರಮಗಳನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಈ ದೇಶ 2047ರಲ್ಲಿ ವಿಕಷಿತ ವಿಶ್ವಗುರು ಭಾರತವಾಗಿ ಪರಿವರ್ತಿಸಲು ಸಂಕಲ್ಪ ತೊಟ್ಟಿರುವ ನಮ್ಮ ಹೆಮ್ಮೆಯ ನರೇಂದ್ರ ಮೋದಿಯವರಿಗೆ ಬಲ ನೀಡಲು ನಾನು ಕಟಿಬದ್ಧನಾಗಿದ್ದೇನೆ. ತುಳುವ ನಾಡಿನ ಪುಣ್ಯ ಭೂಮಿಯ ಧರ್ಮ ರಕ್ಷಣೆ ಮತ್ತು ಅಭಿವೃದ್ಧಿ ನನ್ನ ಮುಂದಿನ ಗುರಿ. ಕಾರ್ಯಕರ್ತರ ಕಷ್ಟಗಳಿಗೆ, ನೋವುಗಳಿಗೆ ಸ್ಪಂದಿಸುವವನಾಗಿ ನಿಮ್ಮ ಜೊತೆಯಲ್ಲಿರುತ್ತೇನೆ. ಬಂಟ್ವಾಳ ಕ್ಷೇತ್ರದ ಸವಾಲುಗಳೇನು, ಕಾರ್ಯಕರ್ತರ ಭಾವನೆಗಳೇನು ಎಂಬುವುದರ ಅರಿವು ನನಗಿದೆ. ಈ ಚುನಾವಣಾ ಮಹಾ ಸಮರದಲ್ಲಿ ನಾವೆಲ್ಲಾ ಒಂದಾಗಿ ಶ್ರಮಿಸಿ ಜಯಗಳಿಸೋಣ ” ಎ೦ದರು.
ಬಂಟ್ವಾಳದ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಳಿಪಾಡಿಯವರು ಕ್ಯಾಪ್ಟನ್ ಬ್ರಿಜೇಶ್ ಚೌಟರವರಿಗೆ ಶುಭ ಕೋರುತ್ತಾ ” ನಮಗೆ ಗೆಲುವು ನಿಶ್ಚಿತ. ಆದರೆ ಮೈಮರೆವು ಸಲ್ಲದು. ಗೆಲುವಿಗಾಗಿ ಕಾರ್ಯಕರ್ತರ ಪರಿಶ್ರಮ ದ್ವಿಗುಣಗೊಳ್ಳಬೇಕು. ಮುಂದಿನ ದಿನಗಳಲ್ಲಿ ಕ್ಷೇತ್ರದ ಪ್ರತಿ ಗ್ರಾಮಗಳಿಗೆ ಪ್ರವಾಸ ಮಾಡಿ, ಜನಜಾಗೃತಿಗೊಳಿಸುವ ಮೂಲಕ ನರೇಂದ್ರ ಮೋದಿಯವರನ್ನು 3 ನೇ ಭಾರಿ ಪ್ರಧಾನಿ ಮಾಡುವುದಕ್ಕಾಗಿ ಬ್ರಿಜೇಶ್ ಚೌಟರನ್ನು ಸಂಸದರಾಗಿ ಗೆಲ್ಲಿಸೋಣ” ಎ೦ದರು.
ಕ್ಷೇತ್ರಾಧ್ಯಕ್ಷರಾದ ಶ್ರೀ ದೇವಪ್ಪ ಪೂಜಾರಿಯವರು ಪ್ರಾಸ್ತವಿಕ ನುಡಿಗಳನ್ನಾಡುತ್ತಾ, ವಿಶ್ವಮಾನ್ಯ ನಾಯಕ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದಕ್ಕಾಗಿ ಯುವ ಅಭ್ಯರ್ಥಿ ಬ್ರಿಜೇಶ್ ಚೌಟರನ್ನು ಬಿಜೆಪಿ ರಾಷ್ಟ್ರೀಯ ವರಿಷ್ಠರು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ಕಳೆದ ಭಾರಿ ಬಂಟ್ಟಾಳದಲ್ಲಿ ನಳಿನ್ ಕುಮಾರ್ ಕಟೀಲ್ ರವರಿಗೆ 31000 ಮತಗಳ ಮುನ್ನಡೆ ನೀಡಲಾಗಿದ್ದು, ಈ ಸಲ 50000 ಮತಗಳ ಮುನ್ನಡೆಯೊಂದಿಗೆ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಕಾರ್ಯಕರ್ತರಾದ ನಾವೆಲ್ಲ ಶ್ರಮಿಸೋಣ ಎ೦ದರು. ಕ್ಷೇತ್ರ ಬಿಜೆಪಿ ವತಿಯಿಂದ ಕ್ಷೇತ್ರ ಅಧ್ಯಕ್ಷರಾದ ದೇವಪ್ಪ ಪೂಜಾರಿ ಬ್ರಿಜೇಶ್ ಚೌಟರವರಿಗೆ ಸಾಲು ಹಾಕಿ ಅಭಿನಂದಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಶಾಸಕರಾದ ಶ್ರೀ ಪದ್ಮನಾಭ ಕೊಟ್ಟಾರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ಬಂಟ್ವಾಳ ಮಂಡಲ ಪ್ರಭಾರಿ ಶ್ರೀಮತಿ ಪೂಜಾ ಪೈ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವರ್, ಹರಿಕೃಷ್ಣ ಬಂಟ್ವಾಳ ರಾಜ್ಯ ನಾಯಕರಾದ ವಿಕಾಸ್ ಪುತ್ತೂರು, ಯುವ ಚಾಪಾಲ್ ಕಾರ್ಯಕ್ರಮದ ಜಿಲ್ಲಾ ಪ್ರಭಾರಿ ಸಂದೇಶ್ ಶೆಟ್ಟಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ರವೀಶ್ ಶೆಟ್ಟಿ ಡೊಂಬಯ ಅರಳ ಪ್ರಮುಖರಾದ ಚೆನ್ನಪ್ಪ ಕೋಟ್ಯಾನ್ ಉಪಸ್ಥಿತರಿದ್ದರು. ಸಭೆಯಲ್ಲಿ ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ರಾಮದಾಸ್ ಬಂಟ್ವಾಳ್, ತುಂಗಪ್ಪ ಬಂಗೇರ ಸಂಜಯ ಪ್ರಭು, ದೇವದಾಸ್ ಶೆಟ್ಟಿ, ದಿನೇಶ್ ಅಮ್ಟೂರು, ಲಕಿತಾ ಶೆಟ್ಟಿ, ವಸಂತ ಪೂಜಾರಿ, ಶ್ರೀಮತಿ ಕಮಲಾಕ್ಷಿ ಪೂಜಾರಿ, ಮಾದವ ಮಾವೆ, ಗಣೇಶ್ ರೈ ಚಿದಾನಂದ ರೈ ಸೀತಾರಾಮ ಪೂಜಾರಿ ರಮಾನಾಥ ರಾಯಿ ಪುರುಷೋತ್ತಮ ಶೆಟ್ಟಿ ಜಯರಾಮ ನಾಯ್ಕ ರೋನಾಲ್ಡ್ ಡಿ ಸೋಜಾ ಚಂದ್ರಾವತಿ ಪೊಳಲಿ ಹರ್ಷಿಣಿ ಭಾರತಿ ಚೌಟ ಮಮತಾ ಬಾಳ್ತಿಲ ಶೋಭಾ ಬೋಳಂತೂರು ರಂಜಿತ್ ಮೈರ ಯಶೋಧರ ಕರ್ಬೆಟ್ಟು ಮೋಹನ್ ಪಿ ಎಸ್ ಆನಂದ ಶಂಭೂರು ವಿಶ್ವನಾಥ ಪೂಜಾರಿ ಕಟ್ಟತ್ತಿಲ ಮುಂತಾದವರು ಭಾಗವಹಿಸಿದ್ದರು.

whatsapp image 2024 03 20 at 4.30.59 pm (1)

Sponsors

Related Articles

Back to top button