ಶ್ರೀ ಮಹಾವೀರ ಪ್ರಥಮ ದರ್ಜೆ ಕಾಲೇಜು – ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ…

ಮೂಡುಬಿದರೆ:ಹೋಲಿ ರೋಸರಿ ಪ್ರೌಢಶಾಲೆ ಮೂಡುಬಿದರೆಯ ಆವರಣದಲ್ಲಿ ನಡೆದ ಶ್ರೀ ಮಹಾವೀರ ಪ್ರಥಮ ದರ್ಜೆ ಕಾಲೇಜ್ ನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಪುರಸಭಾ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಅಭಯ ಚಂದ್ರ ಜೈನ್, ಪುರಸಭಾ ಸದಸ್ಯರಾದ ಸುರೇಶ್ ಪ್ರಭು, ಸುರೇಶ್ ಕೋಟ್ಯಾನ್, ಕಾಲೇಜಿನ ಪ್ರಾಂಶುಪಾಲರಾದ ರಾಧಾಕೃಷ್ಣ, ಹೋಲಿ ರೋಜರಿ ಚರ್ಚಿನ ಸಿಸ್ಟರ್ ಭಗಿನಿ ಸುನೀತಾ ಮೊಂತೆರೋ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ. ರಮೇಶ್ ಭಟ್, ಶಿಬಿರಾಧಿಕಾರಿಗಳಾದ ಶ್ರೀಮತಿ ಶಾರದ, ಶ್ರೀಮತಿ ಪೂರ್ಣಿಮಾ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
