ಸ ಪ ಪೂ ಕಾಲೇಜು ಸಜಿಪಮೂಡ 2025 _26 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ…

ಬಂಟ್ವಾಳ: ಸರಕಾರಿ ಪದವಿ ಪೂರ್ವ ಕಾಲೇಜು ಸಜಿಪಮೂಡ 2025 _26 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಸಜೀಪ ಮಾಗಣೆ ತಂತ್ರಿ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಂ ಸುಬ್ರಹ್ಮಣ್ಯ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಸಾಧಿಸಿ ಹೆತ್ತವರಿಗೆ ಹಾಗೂ ಸಂಸ್ಥೆಗೆ ಹಾಗೂ ಊರಿಗೆ ಒಳ್ಳೆಯ ಹೆಸರು ಗಳಿಸಿ ಆದರ್ಶ ವಿದ್ಯಾರ್ಥಿಗಳಾಗಿ ಎಂದು ಅವರು ಶುಭ ಹಾರೈಸಿದರು. ಪ್ರಾಂಶುಪಾಲ ಡಾ. ಎನ್ ಎಸ್. ಜೈರಾಭಿ ಮಕ್ಕಳಿಗೆ ಹಿತನುಡಿಗಳನ್ನಾಡಿ ವಿದ್ಯಾರ್ಥಿಗಳಿಗೆ ಕಲಿಯಲು ಅಗತ್ಯವಾದ ಯಾವುದೇ ರೀತಿಯ ಸಹಾಯ ಸಹಕಾರ ನೀಡಲು ತಾನು ಬದ್ಧನಾಗಿರುವುದಾಗಿ ಸಂಸ್ಥೆಯಲ್ಲಿ ದುಡಿಯುತ್ತಿರುವ ಎಲ್ಲಾ ಉಪನ್ಯಾಸಕರ ಪರವಾಗಿ ಮಕ್ಕಳಿಗೆ ಶುಭ ಹಾರೈಸಿದರು
ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಧ್ಯಕ್ಷರು -ಶ್ರೀಕಾಂತ್ ಶೆಟ್ಟಿ, ಸಂಕೇಶ್ ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು – ಶ್ರೀ ವಿಶ್ವನಾಥ ಕೊಟ್ಟಾರಿ,
ನಿಕಟ ಪೂರ್ವ ಪ್ರಭಾರ ಪ್ರಾಂಶುಪಾಲರು- ಸುರೇಶ ಕುಮಾರ್ ಐತಾಳ್ ಶುಭ ಹಾರೈಸಿದರು. ಕಾಲೇಜು ಉಪನ್ಯಾಸಕರಾದ ಕುಮಾರಿ ಸ್ಪೂರ್ತಿ ಸರ್ವರನ್ನು ಸ್ವಾಗತಿಸಿದರು.ಶ್ರೀಮತಿ ಗಾಯತ್ರಿ, ಶ್ರೀಮತಿ ಭಾರತಿ, ಬಾಲಕೃಷ್ಣ ಎನ್ ವಿ ಸಭಾಕಲಾಪದಲ್ಲಿ ಸಹಕರಿಸಿದರು.
ಕಳೆದ ವರ್ಷ ಸಂಸ್ಥೆಯಲ್ಲಿ ವಿಶಿಷ್ಟ ಶ್ರೇಣಿ ಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿಯರಾದ ಕುಮಾರಿ ಅಸ್ಪಿಯಾ & ಆಯಿಷತ್ ಮುಬಿನಾ ಬಾನು ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಉಪನ್ಯಾಸಕರಾದ ಬಾಲಕೃಷ್ಣ ನಾಯ್ಕ್, ಕೆ, ಬೆಳ್ಳಾರೆ, ಶೋಭಾ, ಸಿಂಧೂಜ,, ವೇದಾವತಿ, ಗುಮಾಸ್ತೆ ಲತಾ, ಸಂಜೀವ ಪೂಜಾರಿ ಪೋಷಕರಾದ ಅಬ್ದುಲ್ ಬಷೀರ್ & ಸಾರಮ್ಮ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

whatsapp image 2025 06 23 at 5.58.11 pm

Sponsors

Related Articles

Back to top button