ಎಸ್.ಎಂ. ಕೃಷ್ಣ ಅವರಿಗೆ ಅಂತಿಮ ನಮನ ಸಲ್ಲಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್…
ಬೆಂಗಳೂರು:ರಾಜ್ಯಪಾಲರಾಗಿ , ಕೇಂದ್ರ ಸಚಿವರಾಗಿ ,ಮುಖ್ಯಮಂತ್ರಿ ಯಾಗಿ ಜನ ಮೆಚ್ಚಿದ ನಾಯಕ, ಆಧುನಿಕ ಬೆಂಗಳೂರಿನ ನಿರ್ಮಾತೃ ಸನ್ಮಾನ್ಯ ಎಸ್ ಎಂ ಕೃಷ್ಣ ಅವರ ನಿಧನ ಸುದ್ದಿ ತಿಳಿದ ತಕ್ಷಣ ಸುಳ್ಯದಿಂದ ಬೆಂಗಳೂರಿನ ಎಸ್ ಎಂ ಕೃಷ್ಣ ಅವರ ನಿವಾಸಕ್ಕೆ ಆಗಮಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅಂತಿಮ ದರ್ಶನ ಪಡೆದರು.
ಎಸ್ ಎಂ ಕೃಷ್ಣ ಅವರ ಒಡನಾಟ, ಅವರೊಂದಿಗಿನ ಪ್ರವಾಸ, ನೆನೆಸಿ ಅವರು ಭಾವುಕರಾದರು.