ಪಿ.ಎಫ್.ಐ ನಾಯಕ ಕೆ.ಎಂ.ಶರೀಫ್ ನಿಧನಕ್ಕೆ ಟಿ.ಎಂ.ಶಾಹೀದ್ ತೆಕ್ಕಿಲ್ ಸಂತಾಪ…

ಸುಳ್ಯ:ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಹಾಲಿ ರಾಷ್ಟ್ರೀಯ ಕೋಶಾಧಿಕಾರಿ, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಕೆ.ಎಂ.ಶರೀಫ್ ರವರ ನಿಧನಕ್ಕೆ ಕೆ.ಪಿ.ಸಿ.ಸಿ.ಯ ಮಾಜಿ ಕಾರ್ಯದರ್ಶಿ ಟಿ.ಎಂ.ಶಾಹೀದ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೆ.ಎಂ.ಶರೀಫ್ ಅವರು ಮುಸ್ಲಿಮ್ ಸಮುದಾಯದ ಓರ್ವ ಸಕ್ರಿಯ ನಾಯಕ ಮತ್ತು ಸಾಮಾಜಿಕ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದವರು.ಅವರ ನಿಧನದಿಂದ ಮುಸ್ಲಿಮ್ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಕಾಂಗ್ರೆಸ್ ಮುಖಂಡ ಟಿ.ಎಂ.ಶಾಹೀದ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. ಅವರ ಕುಟುಂಬ ವರ್ಗದವರಿಗೂ, ಅವರ ಅಭಿಮಾನಿಗಳಿಗೂ ಕೆ.ಎಂ.ಶರೀಫ್ ಅವರ ಅಗಲುವಿಕೆಯಿಂದ ಉಂಟಾದ ದುಃಖವನ್ನು ಸಹಿಸಲು ಅಲ್ಲಾಹು ದಯಪಾಲಿಸಲಿ ಹಾಗೂ ಮೃತರ ಮಗ್ಫಿರತ್ ಗಾಗಿ ಸರ್ವರು ಪ್ರಾರ್ಥಿಸಬೇಕಾಗಿ ಟಿ.ಎಂ.ಶಾಹೀದ್ ವಿನಂತಿಸಿದ್ದಾರೆ.
ಟಿ.ಎಂ.ಶಾಹೀದ್