ಸಂಧ್ಯಾವಂದನೆ ಹಾಗೂ ನಿತ್ಯ ದೇವತಾರ್ಚನ ಶಿಬಿರ ಆರಂಭ…
ಬಂಟ್ವಾಳ: ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ತು ಬಂಟ್ವಾಳ ಇದರ ವತಿಯಿಂದ ಕರ್ನಾಟಕ ಸರ್ಕಾರ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಆಶ್ರಯದಲ್ಲಿ ಇಲ್ಲಿ ಫೆ.6 ರಂದು ಸಂಧ್ಯಾವಂದನೆ ಹಾಗೂ ನಿತ್ಯ ದೇವತಾರ್ಚನ ಶಿಬಿರ ಬಿಸಿರೋಡ್ ನ ಬಂಟ್ವಾಳ ಬ್ರಾಹ್ಮಣ ಪರಿಷತ್ ಸಭಾಭವನದಲ್ಲಿ ಆರಂಭಗೊಂಡಿತು.
ಮೂರೂ ಮತಸ್ಥರಿಗೆ ಅವರವರ ಸಂಪ್ರದಾಯಕ್ಕನುಗುಣವಾಗಿ ಗುರುಮುಖೇನ ಅಧ್ಯಯನ ಮಾಡುವ ವ್ಯವಸ್ಥೆಗೆ ದೀಪ ಬೆಳಗಿಸುವ ಮೂಲಕ ಜಿಲ್ಲಾ ಅಧ್ಯಕ್ಷರಾದ ವೇದಮೂರ್ತಿ ಕೃಷ್ಣರಾಜ ಭಟ್ ಪೊಳಲಿ ಚಾಲನೆ ನೀಡಿದರು. ಬಂಟ್ವಾಳ ತಾಲೂಕು ಅಧ್ಯಕ್ಷ ವೇದಮೂರ್ತಿ ಶಿವರಾಮ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಪೊಳಲಿ ಗಿರಿಪ್ರಕಾಶ ತಂತ್ರಿ, ಕೂಟ ಮಹಾಜಗತ್ತು ಬಂಟ್ವಾಳ ಅಂಗಸಂಸ್ಥೆ ಅಧ್ಯಕ್ಷ ನ್ಯಾಯವಾದಿ ನಾರಾಯಣ ಸೋಮಯಜಿ, ಕಾರ್ಯದರ್ಶಿ ಗಣೇಶ ಸೋಮಯಾಜಿ.ಕೆ, ಬಂಟ್ವಾಳ ಬ್ರಾಹ್ಮಣ ಪರಿಷತ್ ಕಾರ್ಯದರ್ಶಿ ನ್ಯಾಯವಾದಿ ಜೆಡ್ಡು ಪ್ರಕಾಶ್ ನಾರಾಯಣ, ಬಂಟ್ವಾಳ ತಾಲೂಕು ನಿರ್ದೇಶಕ ಎo ಸುಬ್ರಮಣ್ಯ ಭಟ್, ಲಕ್ಷ್ಮೀಶ ಮಯ್ಯ, ರಾಜ ಐತಾಳ್ ಪೊಳಲಿ ಹವ್ಯಕ ಮಂಡಲ ಗುರಿಕಾರ ನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದರು.