ಸಂಪಾಜೆ ಗ್ರಾಮ ಪಂಚಾಯತ್ ಸ್ವಚ್ಛತಾ ಸಮಿತಿ ಸಭೆ…

ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ಸ್ವಚ್ಛತಾ ಸಮಿತಿ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ಅಧ್ಯಕ್ಷತೆಯಲ್ಲಿ ನಡೆಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ ರವರು ಸರ್ವರನ್ನು ಸ್ವಾಗತಿಸಿ ಸ್ವಚ್ಛತೆಯ ಕುರಿತು ಮಾಹಿತಿ ನೀಡಿದರು. ಸರಕಾರದ ಆದೇಶದ ಪ್ರಕಾರ ಸ್ವಚ್ಛತಾ ಕಾರ್ಯ ಸಂಜೀವಿನಿ ಒಕ್ಕೂಟದ ಮೂಲಕ ಮಾಡಬೇಕಾಗಿದ್ದು ಸರಕಾರದ ಆದೇಶ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ಸಂಜೀವಿನಿ ಒಕ್ಕೂಟದ ಮೂಲಕ ಸ್ವಚ್ಛತೆ ಕಾರ್ಯ ನಡೆಸುವ ಬಗ್ಗೆ ವರ್ತಕರು, ಸಂಜೀವಿನಿ ಒಕ್ಕೂಟದ ಸದಸ್ಯರುಗಳು ಗ್ರಾಮ ಪಂಚಾಯತ್ ಸದಸ್ಯರುಗಳು ಸಭೆ ಸೇರಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
ಹಸಿ ಕಸ ಒಣ ಕಸ ವಿಂಗಡಿಸಿ ವಾಹನದ ಮೂಲಕ ಸಂಗ್ರಹಿಸಲಾಗುತಿದ್ದು ಎಲ್ಲರ ಸಹಕಾರ ಕೋರಲಾಯಿತು.
ಹಸಿ ಕಸ ಸಂಗ್ರಹ ಮಾಡಲು ಬಕೆಟ್ ನೀಡುವುದು, ವರ್ತಕರು -ಮನೆ ಮಾಲೀಕರು ಕಸದ ಸಂಗ್ರಹ ವಾಹನ ಕಸ ನೀಡಿ ಸಹಕರಿಸುವುದು, ಪಂಪರ್ಸ್ ಇನ್ನಿತರ ವಸ್ತುಗಳು ಹಸಿ ಕಸದಲ್ಲಿ ಹಾಗೂ ಒಣ ಕಸದಲ್ಲಿ ಹಾಕದೆ ಸಹಕರಿಸುವುದು,ಮುಂದಿನ ದಿನಗಳಲ್ಲಿ ಪಂಪರ್ಸ್ ಗೆ ಸುಡುವ ಯಂತ್ರ ಖರೀದಿಸುವುದರ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ ಹನೀಫ್ ಸಂಪಾಜೆ. ಸದಸ್ಯರುಗಳಾದ ಜಿ ಕೆ ಹಮೀದ್ ಗೂನಡ್ಕ, ವಿಮಲಾ ಪ್ರಸಾದ್, ಲಿಸ್ಸಿ ಮೊನಾಲಿಸಾ, ಅನುಪಮ ವರ್ತಕರ ಸಂಘದ ಅಧ್ಯಕ್ಷರಾದ ಚಕ್ರಪಾಣಿ, ಕಾರ್ಯದರ್ಶ ರಝಾಕ್ ಮುರಳಿ ಭಟ್ ಕಿಲಾರ್ ಸ್ವಚ್ಛತಾ ಸಮಿತಿ ಕಾರ್ಯದರ್ಶಿ ಮಂಜುನಾಥ್ ಕಿಶೋರ್ ಕುಮಾರ್, ಪದ್ಮಯ್ಯ ಗೌಡ ಕೆ ಎಂ ಅಶ್ರಫ್ ಕಲ್ಲುಗುಂಡಿ, ಬಿ. ಹಸೈನಾರ್ ಸುನಿಲ್ ಕುಮಾರ್, ರಜಾಕ್ ಹಾಜಿ ಟಿ ಎಂ. ಸುಜಿತ್ ಕುಮಾರ್ ಕೆ ಪಿ. ಮಹಮದ್ ಕಾನಕೋಡ್, ಪಶು ಸಕಿ ಮಾಲತಿ ನೌಶಾದ್ ಬದ್ರಿಯಾ.ಅಬೂಬಕ್ಕರ್ ಜನತಾ ಸಂಜೀವಿನಿ ಒಕ್ಕೂಟದ ಕಾಂತಿ ಬಿ. ಎಸ್, ಸೌಮ್ಯ, ಭಾರತಿ, ಲಲನ ಪಶು ಸಕಿ ಮಾಲತಿ ಪಂಚಾಯತ್ ಸಿಬ್ಬಂದಿಗಳು ವರ್ತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸ್ವಚ್ಛತಾ ಸಿಬ್ಬಂದಿಗಳಾದ ಮಮತಾ, ಶಾಲಿನಿ, ಹರಿಣಾಕ್ಷಿ ಉಪಸ್ಥಿತರಿದ್ದರು.