ವಿಶ್ವ ಭಾರತಿ ಯಕ್ಷ ಸಂಭ್ರಮ ಭಾರತ ದರ್ಶನ-ಸಮಾರೋಪ ಸಮಾರಂಭ…

ಬಂಟ್ವಾಳ: ವಿಶ್ವ ಭಾರತಿ ಯಕ್ಷ ಸಂಜೀವಿನಿ ರಿಜಿಸ್ಟರ್ಡ್ ಮುಡಿಪು, ತುಳು ಶಿವಳ್ಳಿ ಸೇವಾ ಟ್ರಸ್ಟ್ ಬಂಟ್ವಾಳ ಇವುಗಳ ಸಂಯುಕ್ತ ಆಶಯದಲ್ಲಿ ತುಳು ಶಿವಳ್ಳಿ ಸಭಾಭವನದಲ್ಲಿ 9 ದಿನಗಳ ವಿಶ್ವ ಭಾರತಿ ಯಕ್ಷ ಸಂಭ್ರಮ ಭಾರತ ದರ್ಶನ ಪ್ರಯುಕ್ತ 9 ದಿನಗಳಲ್ಲಿ ವಿವಿಧ ಸಂಸ್ಥೆಗಳ ಹಾಗೂ ಪ್ರಸಿದ್ಧ ಅತಿಥಿ ಕಲಾವಿದರ ನೇತೃತ್ವದಲ್ಲಿ ಸರಣಿ ಯಕ್ಷಗಾನ ತಾಳಮದ್ದಳೆ ಸಮಾರೋಪ ಸಮಾರಂಭ ಭಾನುವಾರದಂದು ಕರ್ನಾಟಕ ಸರ್ಕಾರ ಮಾಜಿ ಸಚಿವ ಬಿ ರಮಾನಾಥ ರೈ ಅಧ್ಯಕ್ಷತೆಯಲ್ಲಿ ಜರಗಿತು.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಕೀನ್ಯ ಕೃಷ್ಣಪ್ಪ, ಅಕಾಡೆಮಿ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ, ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ವೈದ್ಯರಾದ ಡಾ ಶಿವಪ್ರಸಾದ್ ಶೆಟ್ಟಿ, ತುಳು ಶಿವಳ್ಳಿ ಸೇವಾ ಟ್ರಸ್ಟ್ ಬಂಟ್ವಾಳ ತಾಲೂಕು ಅಧ್ಯಕ್ಷ ರಾಜರಾಮ ಭಟ್, ವಿಶ್ವ ಭಾರತಿ ಸಂಚಾಲಕ ಕಾರ್ಯಕ್ರಮದ ರೂವಾರಿ ಪ್ರಶಾಂತ್ ಕುಮಾರ್ ಹೊಳ್ಳ, ಯಕ್ಷಗಾನ ಸಂಘಟಕ ಧರ್ಮಸ್ಥಳ ಭುಜಬಲಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದಿವಂಗತ ಕುಬಣೂರು ಶ್ರೀಧರ ರಾವ್ ಸಂಸ್ಮರಣ ಕಾರ್ಯಕ್ರಮವನ್ನು ಖ್ಯಾತ ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ ಅರ್ಥಗರ್ಭಿತವಾಗಿ ನಡೆಸಿಕೊಟ್ಟರು. ಸಮಾರೋಪದ ಅಂಗವಾಗಿ ಗದಾಯುದ್ಧ ಯಕ್ಷಗಾನ ತಾಳಮದ್ದಳೆ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಜರಗಿತ್ತು.