ಯುವತಿಯೊಂದಿಗೆ ಪರಾರಿಯಾದ ಸ್ವಾಮೀಜಿ ಮಂಗಳೂರಿನಲ್ಲಿ ಪತ್ತೆ – ಸ್ವಾಮೀಜಿಯ ಹೊಸ ಗೆಟಪ್ ಗೆ ಜನ ಅಚ್ಚರಿ….

ಮಂಗಳೂರು : ಕೋಲಾರದ ಹೊಳಲಿ ಭೀಮಲಿಂಗೇಶ್ವರ ಸೇವಾಶ್ರಮದ ಪೀಠಾಧಿಪತಿ ದತ್ತಾತ್ರೇಯ ಅವಧೂತ ಸ್ವಾಮೀಜಿ (40) ಪಾದಪೂಜೆ ಮಾಡುತ್ತಿದ್ದ ಯುವತಿಯೊಂದಿಗೆ ನಾಪತ್ತೆಯಾಗಿದ್ದು, ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.
ಕೋಲಾರ ತಾಲ್ಲೂಕು ಹೊಳಲಿ ಗ್ರಾಮದಿಂದ ಫೆ.27ರ ಶಿವರಾತ್ರಿಯಂದು ಸ್ವಾಮೀಜಿ ಯುವತಿಯೊಂದಿಗೆ ನಾಪತ್ತೆಯಾಗಿದ್ದರು. ಅದೇ ಗ್ರಾಮದ 20 ವರ್ಷದ ಯುವತಿಯೊಂದಿಗೆ ಸ್ವಾಮೀಜಿ ನಾಪತ್ತೆಯಾಗಿದ್ದು, ಯುವತಿಯ ಸೋದರ ಮಾವ ಶಂಕರ್ ಕೋಲಾರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.ಸ್ವಾಮೀಜಿ ಬಳಿಕ ಯುವತಿಯ ಅಣ್ಣನಿಗೆ ಕರೆ ಮಾಡಿದ್ದು, ತಿರುಪತಿಯಲ್ಲಿ ತಾವು ಮದುವೆಯಾಗಿರುವುದಾಗಿ ತಿಳಿಸಿದ್ದರು. ಮತ್ತೆ ಅವರ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಇದೀಗ ಸ್ವಾಮೀಜಿ ಮಂಗಳೂರು ಬಳಿ ಯುವತಿಯೊಂದಿಗೆ ಸಿಕ್ಕಿಬಿದ್ದಿರುವುದಾಗಿ ತಿಳಿದುಬಂದಿದೆ.
ಖಾವಿಯ ಬಟ್ಟೆಯಲ್ಲೇ ಸ್ವಾಮೀಜಿಯನ್ನು ಕಂಡಿದ್ದ ಜನರು, ಪ್ಯಾಂಟ್ ಶರ್ಟ್ ಹಾಕಿಕೊಂಡು ಹೊಸ ಗೆಟಪ್ ನಲ್ಲಿ ಸ್ವಾಮೀಜಿ ಕಾಣಿಸಿಕೊಂಡಿರುವ ಫೋಟೊ ನೋಡಿ ಅಚ್ಚರಿಗೊಂಡಿದ್ದಾರೆ.
ತಮ್ಮ ಮಠಕ್ಕೆ ಬರುತ್ತಿದ್ದ ಯುವತಿ ಜೊತೆ ದತ್ತಾತ್ರೇಯ ಸ್ವಾಮೀಜಿ ಶಿವರಾತ್ರಿ ದಿನ ನಾಪತ್ತೆಯಾಗಿದ್ದರು. ಆ ಯುವತಿ ಆಗಾಗ್ಗೆ ಮಠಕ್ಕೆ ಬಂದು ಸ್ವಾಮೀಜಿಯ ಪಾದಪೂಜೆ ಮಾಡುತ್ತಿದ್ದಳು. ಮಠದ ಕೆಲಸಕ್ಕೂ ಸಹಾಯ ಮಾಡುತ್ತಿದ್ದಳು. ಅದೇ ಯುವತಿಯೊಂದಿಗೆ ಸ್ವಾಮೀಜಿ ಪರಾರಿಯಾಗಿದ್ದರು.
ನಾಪತ್ತೆಯಾಗಿದ್ದ ದತ್ತಾತ್ರೇಯ ಅವಧೂತ ಸ್ವಾಮೀಜಿ ಮದುವೆಯಾಗಿ, ತಮ್ಮ ವೇಷವನ್ನೂ ಬದಲಾಯಿಸಿದ್ದು, ಅವರ ಹೊಸ ಲುಕ್ ಕಂಡು ಭಕ್ತರು ಅಚ್ಚರಿಗೊಂಡಿದ್ದಾರೆ. ಗಡ್ಡ, ಮೀಸೆ ಬಿಟ್ಟು ಕಾವಿ ತೊಟ್ಟು ಸ್ವಾಮೀಜಿಯಂತಿದ್ದವರು ಈಗ ಕ್ಲೀನ್​ ಶೇವ್ ಮಾಡಿ​, ಪ್ಯಾಂಟ್​ ಶರ್ಟ್​ ಧರಿಸಿ ಅಚ್ಚರಿ ಮೂಡಿಸಿದ್ದಾರೆ.

Swamji1 1583318922 300x169 Swamiji3 1583318915 300x169

Related Articles

Leave a Reply

Your email address will not be published. Required fields are marked *