ಸಿಎಎ ವಿರೋಧಿ ಪ್ರತಿಭಟನೆ – ಮುಸ್ಲಿಂ ಕೇಂದ್ರ ಸಮಿತಿಗೆ ಅನುಮತಿ ನಿರಾಕರಿಸಿದ ಪೊಲೀಸರು….
ಮಂಗಳೂರು : ಜ. 4ರಂದು ನೆಹರು ಮೈದಾನದಲ್ಲಿ ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ದ ಉದ್ದೇಶಿತ ಪ್ರತಿಭಟನೆಗೆ ಮಂಗಳೂರು ನಗರ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್ ಅಧಿಕಾರಿಗಳು, ಸಮಾಲೋಚನೆಯ ಬಳಿಕ ಅರ್ಜಿಯನ್ನು ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಕ್ಷೇತ್ರ ಸಂಚಾರಕ್ಕೆ ಮೌಲ್ಯಮಾಪನ ಮಾಡಲು ಕಳುಹಿಸಲಾಗಿದೆ ಎಂದರು.
ವರದಿಯ ಪ್ರಕಾರ ಈ ಕೆಳಗಿನ ಕಾರಣಗಳಿಂದ ನೆಹರು ಮೈದಾನದಲ್ಲಿ ಪ್ರತಿಭಟನೆ ನಡೆಸುವುದು ಉತ್ತಮವಲ್ಲ ಎಂದಿದ್ದಾರೆ.
1. ನೆಹರೂ ಮೈದಾನದ ಸುತ್ತಮುತ್ತಲಿನ ರಸ್ತೆಗಳು ವಿಶೇಷವಾಗಿ ಎಬಿ ಶೆಟ್ಟಿ ವೃತ್ತದ ಗಡಿಯಾರ ಗೋಪುರವು ಸ್ಮಾರ್ಟ್ ಸಿಟಿ ಪ್ರಾಜೆಕ್ಟ್‌ನ ಬೃಹತ್ ನಾಗರಿಕ ಕಾರ್ಯಗಳು ನಡೆಯುತ್ತಿದ್ದು, ಸಂಚಾರಕ್ಕೆ ಒಂದೇ ಮಾರ್ಗವಾದ ಕಾರಣ ಹಾಗೂ ಇತರೆ ಲೇನ್‌ಗಳಲ್ಲಿ ಕೂಡಾ ಕಾಮಗಾರಿ ಕಾರ್ಯವಾಗುತ್ತಿರುವ ಕಾರಣ ಸಾರ್ವಜನಿಕರ ಜೀವಕ್ಕೆ ಅಪಾಯವಾಗಬಹುದು.
2. ಸಮೀಪದಲ್ಲಿ ಹಲವಾರು ಆಸ್ಪತ್ರೆಗಳಿವೆ, ಈ ಪ್ರದೇಶದಲ್ಲಿ ದಟ್ಟ ಜನಸಂದಣಿಯಿಂದ ಉಸಿರುಕಟ್ಟುವಂತಾದರೆ, ಅಗತ್ಯ ಮತ್ತು ತುರ್ತು ವಾಹನಗಳು ಚಲಿಸದಂತೆ ತಡೆಯಬಹುದು ಮತ್ತು ಆಂಬ್ಯುಲೆನ್ಸ್ ಸೇವೆ ಮತ್ತು ಔಷಧಿಗಳ ಸರಬರಾಜನ್ನು ತಡೆಯಬಹುದು.
3. ಓಲ್ಡ್ ಕೆಂಟ್ ರಸ್ತೆಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮುಖ್ಯ ಕಚೇರಿಯು ನೆಹರು ಮೈದಾನದಿಂದ ಕೇವಲ 100 ಮೀಟರ್ ದೂರದಲ್ಲಿದೆ, ಅಲ್ಲದೇ ಸಂಚಾರಕ್ಕೆ ಅಡ್ಡಿಯಾಗುವ ಕಾರಣದಿಂದ ಅತ್ಯಗತ್ಯ ಸೇವೆಗಳಿಗೆ ಕಷ್ಟವಾಗುತ್ತದೆ.
ಮೇಲೆ ತಿಳಿಸಲಾದ ವಿಷಯಗಳು ಮತ್ತು ಇತರ ಸಂಗತಿಗಳನ್ನು ಅರ್ಜಿದಾರರಿಗೆ, ಮುಸ್ಲಿಂ ಕೇಂದ್ರ ಸಮಿತಿಯ ಅಧ್ಯಕ್ಷರಿಗೆ ತಿಳಿಸಲಾಗಿದೆ ಹಾಗೂ ಅವರು ಸ್ಥಳದ ಪರ್ಯಾಯ ಪ್ರಸ್ತಾಪವನ್ನು ನೀಡಿದರೆ ಅನುಮತಿಯನ್ನು ಪರಿಗಣಿಸಬಹುದು ಎಂದು ಅವರಿಗೆ ಮನವಿ ಮಾಡಲಾಗಿದೆ.
ಈ ಕಾರಣಗಳಿಂದ ಮುಸ್ಲಿಂ ಕೇಂದ್ರ ಸಮಿತಿಯು ಪ್ರತಿಭಟನೆಯನ್ನು ಮುಂದೂಡಿದ್ದು, ಮಂಗಳೂರು ನಗರ ಪೊಲೀಸರು ಮುಸ್ಲಿಂ ಕೇಂದ್ರ ಸಮಿತಿಗೆ ಧನ್ಯವಾದ ಸಲ್ಲಿಸಿದ್ದು, ಕಾನೂನು ಸುವ್ಯವಸ್ಥೆಯಲ್ಲಿ ಎಲ್ಲರೂ ಸಹಕರಿಸಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.