ರಾಜ್ಯ ಮಟ್ಟದ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಲಾವಿದರ ಒಕ್ಕೂಟ – ಅಧ್ಯಕ್ಷರಾಗಿ ವಿದ್ವಾನ್ ಸಾಯಿನಾರಾಯಣ ಕಲ್ಮಡ್ಕ ಆಯ್ಕೆ…

ಬೆಂಗಳೂರು: ರಾಜ್ಯ ಮಟ್ಟದ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಲಾವಿದರ ಒಕ್ಕೂಟದ ಅಧ್ಯಕ್ಷರಾಗಿ ವಿದ್ವಾನ್ ಸಾಯಿನಾರಾಯಣ ಕಲ್ಮಡ್ಕ ಆಯ್ಕೆ ಆಗಿದ್ದಾರೆ.
ಉಪಾಧ್ಯಕ್ಷರಾಗಿ ವಿದುಷಿ ಶ್ರೇತಾ ವಿಜಯ್‌, ಪ್ರಧಾನ ಕಾರ್ಯದರ್ಶಿಯಾಗಿ ವಿದ್ವಾನ್‌ ಮೈಸೂರು ಸಂಜೀವ್‌ ಕುಮಾರ್‌, ಜತೆ ಕಾರ್ಯದರ್ಶಿಯಾಗಿ ವಿದ್ವಾನ್‌ ಬೆಟ್ಟ ವೆಂಕಟೇಶ್‌, ಖಜಾಂಜಿಯಾಗಿ ವಿದುಷಿ ಜಲಜಾ ಪ್ರಸಾದ್‌ ಸಹಖಜಾಂಜಿಯಾಗಿ ವಿದುಷಿ ಮಮತಾ ಎಸ್‌, ಸಂಘಟನಾ ಕಾರ್ಯದರ್ಶಿಯಾಗಿ (ಸಂಗೀತ) ವಿದುಷಿ ವಿನಯಾ ರಾವ್‌, ಸಂಘಟನಾ ಕಾರ್ಯದರ್ಶಿಯಾಗಿ (ನೃತ್ಯ) ವಿದುಷಿ ಅಂಕಿತಾ, ಗೌರವಾಧ್ಯಕ್ಷರಾಗಿ ಕರ್ನಾಟಕ ಕಲಾಶ್ರೀ ವಿದ್ವಾನ್‌ ಕೆ. ಎಸ್‌. ಮೋಹನ್‌ ಕುಮಾರ್‌ ಹಾಗೂ ಸಂಚಾಲಕರಾಗಿ ಡಾ. ಎಂ.ವಿ ಶ್ರೀನಿವಾಸ್‌ ಮೂರ್ತಿ
ಆಯ್ಕೆ ಆಗಿದ್ದಾರೆ.
ಶಾಸ್ತ್ರೀಯ ಕಲೆಗಳನ್ನು ಉಳಿಸುವುದು ಮತ್ತು ಬೆಳೆಸುವುದು, ಸಂಗೀತ ಹಾಗೂ ನೃತ್ಯ ಕಲಾವಿದರನ್ನು ಒಟ್ಟುಗೂಡಿಸುವ ಉದ್ದೇಶವನ್ನು ಒಕ್ಕೂಟ ಹೊಂದಿದೆ. ಯುವ ಕಲಾವಿದರಿಗೆ ವೇದಿಕೆ ಒದಗಿಸುವುದು, ರಾಜ್ಯಮಟ್ಟದ ಸ್ಪರ್ಧೆಗಳನ್ನು ಏರ್ಪಡಿಸಿ ಶಾಸ್ತ್ರೀಯ ಗುಣಮಟ್ಟ ಹೆಚ್ಚಿಸುವ ಪ್ರಯತ್ನವನ್ನು ಒಕ್ಕೂಟದ ಮೂಲಕ ಮಾಡುವುದಾಗಿ ಸಾಯಿ ನಾರಾಯಣ ಕಲ್ಮಡ್ಕ ತಿಳಿಸಿದ್ದಾರೆ.

Related Articles

Back to top button