ಎಲಿಮಲೆ ಜುಮ್ಮಾ ಮಸೀದಿಗೆ ವಿಧಾನ ಪರಿಷತ್ ಸದಸ್ಯರಾದ ಬಿ ಎಮ್ ಫಾರೂಕ್ ರವರ ಪ್ರದೇಶ ಅಭಿವೃದ್ಧಿ ನಿಧಿಯಿಂದ ರೂ. 5 ಲಕ್ಷ ಅನುದಾನ ಬಿಡುಗಡೆ…

ಸುಳ್ಯ: ತಾಲೂಕಿನ ದೇವಚಳ್ಳ ಗ್ರಾಮದ ಎಲಿಮಲೆ ಅಬ್ದುರಿಯಾಜ್ ಜುಮಾ ಮಸೀದಿಗೆ ಶೌಚಾಲಯ ನಿರ್ಮಾಣದ ಕಾಮಗಾರಿಗಾಗಿ ಅಧ್ಯಕ್ಷರು ಸರ್ಕಾರಿ ಭರವಸೆಗಳ ಸಮಿತಿ ಕರ್ನಾಟಕ ಸರಕಾರ ಹಾಗೂ ವಿಧಾನ ಪರಿಷತ್ ಶಾಸಕರಾದ ಬಿ. ಎಂ.ಫಾರೂಕ್ ರವರು ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಐದು ಲಕ್ಷ ರೂಪಾಯಿ ಅನುದಾನವನ್ನು ಬಿಡುಗಡೆಗೊಳಿಸಿರುತ್ತಾರೆ.
ಈ ಅನುದಾನ ಬಿಡುಗಡೆಗೆ ಜನತಾ ದಳ ರಾಜ್ಯ ಕಾರ್ಯದರ್ಶಿ ಇಕ್ಬಾಲ್ ಎಲಿಮಲೆ ಯವರು ಮಾನ್ಯ ಶಾಸಕರಾದ ಬಿ ಎಮ್ ಫಾರೂಕ್ ರವರಿಗೆ ಕೃತಜ್ಞತೆ ಸಲ್ಲಿಸಿರುತ್ತಾರೆ.