ಪೇರಡ್ಕ-ಗೂನಡ್ಕ ಮುಹಿಯದ್ದೀನ್ ಜುಮ್ಮಾ ಮಸ್ಜಿದ್ ಗಣರಾಜ್ಯೋತ್ಸವ…

ಸುಳ್ಯ: ಗಣರಾಜ್ಯೋತ್ಸವ ಅಂಗವಾಗಿ ಮುಹಿಯದ್ದೀನ್ ಜುಮ್ಮಾ ಮಸ್ಜಿದ್ ವಠಾರದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಜಮಾಅತ್ ಖತೀಬರಾದ ಬಹು. ರಿಯಾಝ್ ಫೈಝಿ ಉಸ್ತಾದರು ದು:ವಾ ನೆರವೇರಿಸಿ ಗಣರಾಜ್ಯೋತ್ಸವದ ಕುರಿತು ಮಾತನಾಡಿದರು. ಈ ಸಂದರ್ಭ ಸಹ ಅಧ್ಯಾಪಕರಾದ ಬಹು. ನೂರುದ್ದೀನ್ ಅನ್ಸಾರಿ ಉಸ್ತಾದರು, ಮದ್ರಸ ವಿದ್ಯಾರ್ಥಿಗಳು,ವಿದ್ಯಾರ್ಥಿನಿಯರು, ಜಮಾಅತ್ ನ ಪ್ರ. ಕಾರ್ಯದರ್ಶಿ ಟಿ.ಎಂ.ಅಬ್ದುಲ್ ರಝಾಕ್ ಹಾಜಿ, ಆಡಳಿತ ಕಮೀಟಿ ಸದಸ್ಯರುಗಳಾದ ಕಾರ್ಯದರ್ಶಿ ಜಿ.ಎಂ.ಇಬ್ರಾಹೀಂ ಪೇರಡ್ಕ, ಟಿ.ಬಿ.ಹನೀಫ ತೆಕ್ಕಿಲ್,ಹಕೀಂ ದರ್ಖಾಸ್, ಜಮಾಅತ್ ಸದಸ್ಯರುಗಳಾದ ಉಸ್ಮಾನ್ ಪಾಂಡಿ, ಟಿ.ಬಿ.ಅಬ್ದುಲ್ಲ ತೆಕ್ಕಿಲ್, ಯೂಸುಫ್ ಪೇರಡ್ಕ,ಸಲೀಂ ದರ್ಖಾಸ್,ಸಂಶುದ್ದೀನ್ ,ಸಿ.ಎಂ.ಇಬ್ರಾಹೀಂ, ಜಿ.ಎಂ.ಅಮೀರ್, ಇಬ್ರಾಹೀಂ ನಡುಬೈಲ್, ಮುಹಿಯದ್ದೀನ್ ಪೆರುಂಗೋಡಿ ಯವರುಗಳು ಉಪಸ್ಥಿತರಿದ್ದರು.ಎಸ್ ಕೆ ಎಸ್ ಬಿವಿ ಅಧ್ಯಕ್ಷ ನಿಯಾಝ್ ಸತ್ಯ ಪ್ರತಿಜ್ಞೆ ಬೋಧಿಸಿದರು.

Related Articles

Back to top button