ರಸ್ತೆ ಸುರಕ್ಷತೆಯಲ್ಲಿ ನಿಯಮ ಪಾಲನೆ ಮುಖ್ಯ: ನ್ಯಾಯಮೂರ್ತಿ ಅನಿಲ್ ಪ್ರಕಾಶ್…

ಬಂಟ್ವಾಳ, ಜ.23:ರಸ್ತೆಯಲ್ಲಿ ಸಂಚರಿಸುವಾಗ ರಸ್ತೆಯ ನಿಯಮಗಳನ್ನು ಸರಿಯಾಗಿ ಅನುಸರಿಸಬೇಕು.ಕಾನೂನು ಪಾಲನೆಯಿಂದ ಸಾರ್ವಜನಿಕವಾಗಿ ತಮ್ಮ ರಕ್ಷಣೆ ಮಾಡಿಕೊಳ್ಳಬೇಕು ಎಂದು ಬಂಟ್ವಾಳದ JMFC ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಅನಿಲ್ ಪ್ರಕಾಶ್ ಎಂ. ಪಿ. ತಿಳಿಸಿದರು.
ಅವರು ಬಂಟ್ವಾಳದ ಎಸ್. ವಿ. ಎಸ್. ದೇವಳ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆದ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ನ್ಯಾಯವಾದಿಗಳಾದ ವಿನೋದ್ ಕುಮಾರ್ ವಿಷ್ಣು ನಗರ ಬಂಟ್ವಾಳರವರು ರಸ್ತೆ ಸುರಕ್ಷತೆ ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಕಾನೂನು ಮಾಹಿತಿ ನೀಡಿದರು.
ಸಭಾಧ್ಯಕ್ಷತೆಯನ್ನು ವಹಿಸಿ ಹಿರಿಯ ನ್ಯಾಯವಾದಿ ಬಿ. ವೆಂಕಟರಮಣ ಶೆಣೈ ಮಾತನಾಡಿ ಈ ದೇಶದ ಕಾನೂನನ್ನು ಪಾಲಿಸುವ ಮೂಲಕ ಪ್ರತಿಯೊಬ್ಬರೂ ಕರ್ತವ್ಯ ನಿರ್ವಹಿಸಿದಾಗ ಯಾವುದೇ ಸಮಸ್ಯೆ ಇರುವುದಿಲ್ಲ ಎಂದರು.
ವೇದಿಕೆಯಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾದ ಶ ಹರಿಣಿ ಕುಮಾರಿ ಡಿ, ವಕೀಲರ ಸಂಘದ ಜೊತೆ ಕಾರ್ಯದರ್ಶಿ ಅಕ್ಷತಾ ಶೆಟ್ಟಿ , ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖಾ ಮೇಲ್ವಿಚಾರಕರಾದ ಶೋಭಾ, ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯ ಎ. ಎಸ್. ಐ. ಲೋಕೇಶ್ , ನಗರ ಪೊಲೀಸ್ ಠಾಣೆಯ ಎ ಎಸ್ ಐ ನಾರಾಯಣ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಶಾಲೆಯ ಮಾಜಿ ಸಂಚಾಲಕರಾದ ಶ್ರೀನಿವಾಸ ಪೈ ಬಂಟ್ವಾಳ ಶುಭಹಾರೈಸಿದರು. ನ್ಯಾಯವಾದಿಗಳಾದ ಶ್ರೀಧರ್ ಪೈ , ಗಣೇಶ ಪೈ ಉಪಸ್ಥಿತರಿದ್ದರು. ಎಸ್. ವಿ. ಎಸ್ .ದೇವಳ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸುರೇಖಾ ಕೆ. ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಸಹ ಶಿಕ್ಷಕಿ ಮಾಣಿಕ್ ಸುನಿತ್ ಡಿಸೋಜಾ ವಂದಿಸಿದರು. ಸಹಶಿಕ್ಷಕ ಪ್ರಶಾಂತ್ ನೇರೋಳು ನಿರೂಪಿಸಿದರು.

Related Articles

Back to top button