ಆಯುಷ್ಮಾನ್ ಆರೋಗ್ಯ ಕೇಂದ್ರ ಪೆರಾಜೆಗೆ ಕಪಾಟು ಹಸ್ತಾಂತರ…
ಬಂಟ್ವಾಳ,ಜ.24:ರಾಷ್ಟ್ರೀಯ ಮಾನವ ಹಕ್ಕು ಮತ್ತು ಮಹಿಳೆ ಮಕ್ಕಳ ಹಿರಿಯರ ಉನ್ನತೀಕರಣ ಸಂಘಟನೆ ದಕ್ಷಿಣ ಕನ್ನಡ ಮತ್ತು ಲಯನ್ಸ್ ಕ್ಲಬ್ ಮಾಣಿ ಇದರ ವತಿಯಿಂದ ಆಯುಷ್ಮಾನ್ ಆರೋಗ್ಯ ಕೇಂದ್ರ ಪೆರಾಜೆ ಕಛೇರಿಗೆ ಸ್ಟೀಲ್ ಕಪಾಟು ಕೊಡುಗೆಯಾಗಿ ಸಂಸ್ಥೆಯ ಅಧ್ಯಕ್ಷ ಸಚ್ಚಿದಾನಂದ ರೈ ಪಾಳ್ಯ ಹಸ್ತಾಂತರಿಸಿದರು.
ಕಮ್ಯುನಿಟಿ ಹೆಲ್ತ್ ಆಫೀಸರ್ ಅಶ್ವಿನಿ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಜನಾರ್ದನ ಪೆರಾಜೆ, ಸಂಸ್ಥೆ ಯ ಉಪಾಧ್ಯಕ್ಷ ಜಯಾನಂದ ಪೆರಾಜೆ, ಜಿಲ್ಲಾ ಕಾರ್ಯದರ್ಶಿ ಮಂಜುಳಾ ಗೌಡ, ತಾಲೂಕು ಕಾರ್ಯದರ್ಶಿ ರವೀಂದ್ರ ರೈ ಮಂಜೋಟಿ ಉಪಸ್ಥಿತರಿದ್ದರು.



